ಪುತ್ತೂರು  ಮತಗಟ್ಟೆಯೊಳಗೆ ಮೊಬೈಲ್ ತೆಗೆದುಕೊಂಡು ಹೋದ ಯುವಕ: ಪ್ರಕರಣ ದಾಖಲು

ಮತದಾನ ಮಾಡಲು ಮತಗಟ್ಟೆಗೆ ತೆರಳಿದಾಗ ಮತದಾರರು ಮೊಬೈಲ್‌ ತೆಗೆದುಕೊಂಡು ಹೋಗದಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಆದರೂ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮತಗಟ್ಟೆಯೊಳಗೆ ಯುವಕನೊಬ್ಬ ಮೊಬೈಲ್ ತೆಗೆದುಕೊಂಡು ಹೋಗಿ ಫೋಟೋ ಕ್ಲಿಕ್ಕಿಸಿರುವ ಘಟನೆ ನಡೆದಿದೆ.

ರಂಜಿತ್ ಬಂಗೇರ ಎಂಬ ಯುವಕ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೋ ತೆಗೆದು ಪುತ್ತೂರಿನ ಕೋಟಿ-ಚೆನ್ನಯ ಕಂಬಳ ವಾಟ್ಸಾಪ್ ಗ್ರೂಪ್‌ಗೆ ಶೇರ್ ಮಾಡಿದ್ದಾನೆ.

ಈ ಫೋಟೊ ನೋಡಿದ ಕೆಲವರು ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ರಂಜಿತ್ ವಿರುದ್ಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ

ರಾಜ್ಯ