ವಿಜ್ಞಾನಿಗಳು ಬಹಿರಂಗಪಡಿಸಿರುವ ಆಧ್ಯಾಯನದ ಪ್ರಕಾರ, ಈ ವರ್ಷದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಭೂಮಿ ತಾತ್ಕಾಲಿಕವಾಗಿ ಸ್ವಲ್ಪ ವೇಗವಾಗಿ ತಿರುಗಲಿದೆ. ಇದರಿಂದಾಗಿ ಜುಲೈ 9, ಜುಲೈ 22 ಹಾಗೂ ಆಗಸ್ಟ್ 5 ರಂದು ಭೂಮಿಯ ತಿರುಗು ಸಮಯ ಸಾಮಾನ್ಯಕ್ಕಿಂತ 1–2 ಮಿಲಿಸೆಕೆಂಡು ಕಡಿಮೆ ಇರುತ್ತದೆ.

ಇದು ಮಾನವನಿಗೆ ಗಮನಸಾಧ್ಯವಲ್ಲದಷ್ಟು ಅಲ್ಪ ವ್ಯತ್ಯಾಸವಾದರೂ, ಅಣು ಘಡಿಗಳು, GPS ಉಪಕರಣಗಳು, ಉಪಗ್ರಹ ಸಂವೇದನೆ ಹಾಗೂ ಆರ್ಥಿಕ ವ್ಯವಹಾರಗಳಂತಹ ನಿಖರ ಸಮಯದ ಅವಲಂಬಿತ ವ್ಯವಸ್ಥೆಗಳಿಗೆ ಮಹತ್ವದ್ದಾಗಿರುತ್ತದೆ. ಈ ವೈಪರಿತ್ಯದ ಕಾರಣವೆಂದರೆ ಸಾಗರ ಅಲೆಗಳ ಒತ್ತಡ, ಹಿಮಪರ್ವತಗಳ ಪುನರ್ವಿತರಣ ಹಾಗೂ ಭೂಮಿ ಕೋರ್ ಮತ್ತು ಮ್ಯಾಂಟಲ್ ನಡುವೆ ಸಂಭವಿಸುವ ಕ್ರಿಯೆಗಳು.
ಇದು ಮಾನವನ ದಿನಚರಿಯಲ್ಲಿ ಯಾವುದೇ ನೇರ ಪರಿಣಾಮ ಬೀರುವುದಿಲ್ಲ ಎಂತಲೂ ವಿಜ್ಞಾನಿಗಳು ತಿಳಿಸಿದ್ದಾರೆ. ಆದಾಗ್ಯೂ, ತಂತ್ರಜ್ಞಾನ ಕ್ಷೇತ್ರಗಳು ಸೂಕ್ಷ್ಮ ತಿದ್ದುಪಡಿ ಮಾಡಬೇಕಾಗಬಹುದು.

