ಬಾಂಗ್ಲಾದೇಶ ವಿರುದ್ಧ ಭರ್ಜರಿ ಗೆಲುವಿನೊಂದಿಗೆ AFC U20 ಏಷ್ಯನ್ ಕಪ್‌ಗೆ ಅರ್ಹತೆ ಪಡೆದ ಭಾರತ!

ಬಾಂಗ್ಲಾದೇಶ ವಿರುದ್ಧ ಭರ್ಜರಿ ಗೆಲುವಿನೊಂದಿಗೆ AFC U20 ಏಷ್ಯನ್ ಕಪ್‌ಗೆ ಅರ್ಹತೆ ಪಡೆದ ಭಾರತ!

ಭಾರತ ಯುವ ಫುಟ್‌ಬಾಲ್ ತಂಡವು ಐತಿಹಾಸಿಕ ಸಾಧನೆ ಮಾಡಿದೆ. ಭಾನುವಾರ ನಡೆದ ಎಎಫ್‌ಸಿ ಯು-20 ಏಷ್ಯನ್ ಕಪ್ ಅರ್ಹತಾ ಟೂರ್ನಿಯ ಗ್ರೂಪ್ ‘ಬಿ’ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 3-0 ಗೋಲುಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ 20 ವರ್ಷಗಳ ನಂತರ ಪ್ರಮುಖ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಅರ್ಹತೆಯ ಹಾದಿ ಹೀಗಿತ್ತು? ​ಈ ಪಂದ್ಯದ ಗೆಲುವಿನೊಂದಿಗೆ ಭಾರತ ಗ್ರೂಪ್ ‘ಬಿ’ ಹಂತದಲ್ಲಿ ಆಡಿದ 3 ಪಂದ್ಯಗಳಿಂದ ಒಟ್ಟು 6 ಅಂಕಗಳನ್ನು ಕಲೆಹಾಕಿತು. ಸಿರಿಯಾ ವಿರುದ್ಧ ನಡೆದ ಇನ್ನೊಂದು ಪಂದ್ಯದಲ್ಲಿ ಆತಿಥೇಯ ಉಜ್ಬೇಕಿಸ್ತಾನ್ 3-0 ಅಂತರದಲ್ಲಿ ಗೆಲುವು ಸಾಧಿಸಿದ್ದರಿಂದ, ಭಾರತ ತನ್ನ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಿತು.

ಎಂಟು ಗ್ರೂಪ್‌ಗಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ ಏಳು ರನ್ನರ್-ಅಪ್ ತಂಡಗಳಲ್ಲಿ ಒಂದಾಗಿ ಭಾರತ ಪ್ರಮುಖ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಭಾರತ ಕೊನೆಯದಾಗಿ 2006 ರಲ್ಲಿ ಎಎಫ್‌ಸಿ ಯು-20 ಏಷ್ಯನ್ ಕಪ್ ಮುಖ್ಯ ಟೂರ್ನಿಯಲ್ಲಿ ಆಡಿತ್ತು.

​ಮುಖ್ಯ ಟೂರ್ನಿಯು ಚೀನಾದಲ್ಲಿ ನಡೆಯಲಿದ್ದು, ಟೂರ್ನಿಯ ಟಾಪ್ 4 ತಂಡಗಳು FIFA U-20 ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲಿವೆ.

ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ