ನವದೆಹಲಿ: ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಮತ್ತು ಸಾಮಾನ್ಯ ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ಎನ್‌ಪಿಸಿಐ (NPCI) ಮಹತ್ವದ ಸ್ಪಷ್ಟನೆ ನೀಡಿದೆ. ವ್ಯಕ್ತಿಯಿಂದ ವ್ಯಕ್ತಿಗೆ (Person-to-Person – P2P) ಮಾಡುವ ಎಲ್ಲಾ ಯುಪಿಐ ಹಣ ವರ್ಗಾವಣೆಗಳು ಯಾವುದೇ ಶುಲ್ಕವಿಲ್ಲದೆ ಶೇ.100 ರಷ್ಟು ಉಚಿತವಾಗಿ ಮುಂದುವರಿಯಲಿವೆ.

ಹಣಕಾಸು ಸಚಿವಾಲಯ ಹೊರಡಿಸಿರುವ ನೂತನ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ನೀವು ಸ್ನೇಹಿತರು, ಕುಟುಂಬಸ್ಥರು ಅಥವಾ ಇನ್ಯಾರೇ ವ್ಯಕ್ತಿಗೆ ಎಷ್ಟು ಹಣ ಕಳುಹಿಸಿದರೂ ಯಾವುದೇ ಬ್ಯಾಂಕ್, ಆ್ಯಪ್‌ಗಳು ಅಥವಾ ಸರ್ಕಾರದಿಂದ ಪ್ರತ್ಯೇಕ ಶುಲ್ಕ, ಪ್ಲಾಟ್‌ಫಾರ್ಮ್ ಫೀಸ್ ಅಥವಾ ಹಿಡನ್ ಚಾರ್ಜ್ ವಿಧಿಸುವಂತಿಲ್ಲ.
ಯಾರಿಗೆ ಉಚಿತ? ಯಾರಿಗೆ ಶುಲ್ಕ? – ಸಂಪೂರ್ಣ ವಿವರ: ಕೇಂದ್ರ ಸರ್ಕಾರವು ‘ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ 2007’ರ ಅಡಿಯಲ್ಲಿ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಒಟ್ಟಾರೆ ಶೇ. 96 ರಷ್ಟು ಯುಪಿಐ ವಹಿವಾಟುಗಳು ಶೂನ್ಯ ಶುಲ್ಕದ ವ್ಯಾಪ್ತಿಯಲ್ಲಿಯೇ ಇರಲಿವೆ.
- ಸಾಮಾನ್ಯ ಗ್ರಾಹಕರಿಗೆ ಶೇ.100 ಉಚಿತ ನಿಮ್ಮ ದೈನಂದಿನ ಯುಪಿಐ ಬಳಕೆಯ ಮೇಲೆ ಈ ಹೊಸ ನಿಯಮದಿಂದ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಮನೆ ಬಾಡಿಗೆ, ಸ್ನೇಹಿತರಿಗೆ ಹಣ ನೀಡುವುದು ಅಥವಾ ಕುಟುಂಬಸ್ಥರಿಗೆ ಕಳುಹಿಸುವ ಹಣದ ಮೇಲಿನ ವಹಿವಾಟುಗಳು ಎಂದಿನಂತೆ ಉಚಿತವಾಗಿರುತ್ತವೆ.
- . ₹2,000 ಗಿಂತ ಹೆಚ್ಚಿನ ಮರ್ಚೆಂಟ್ ಪಾವತಿಗೆ ‘MDR’ಅಂಗಡಿಗಳು ಹಾಗೂ ವಾಣಿಜ್ಯ ಸಂಸ್ಥೆಗಳಿಗೆ (Person-to-Merchant – P2M) ಮಾಡುವ ₹2,000 ಕ್ಕಿಂತ ಹೆಚ್ಚಿನ ಪಾವತಿಗಳಿಗೆ 0.4% Merchant Discount Rate (MDR) ಅನ್ವಯವಾಗುತ್ತದೆ. ಆದರೆ, ಈ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡುವಂತಿಲ್ಲ ಎಂದು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ₹75,000 ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಗರಿಷ್ಠ ₹300 ಶುಲ್ಕ ನಿಗದಿಪಡಿಸಲಾಗಿದೆ.
- ಅಗತ್ಯ ಸೇವೆಗಳಿಗೆ ರಿಯಾಯಿತಿ ರೈಲ್ವೆ, ಟೆಲಿಕಾಂ, ಇಂಧನ (ಪೆಟ್ರೋಲ್/ಡೀಸಲ್), ವಿಮೆ ಮತ್ತು ಕೃಷಿ ಉತ್ಪನ್ನಗಳ ಖರೀದಿಗಾಗಿ ₹2,000 ಕ್ಕಿಂತ ಹೆಚ್ಚು ಹಣ ಪಾವತಿಸಿದಾಗ ಫ್ಲಾಟ್ ₹5 ಶುಲ್ಕ ನಿಗದಿಪಡಿಸಲಾಗಿದೆ. ಮ್ಯೂಚುಯಲ್ ಫಂಡ್ ಹಾಗೂ ಶೇರು ಮಾರುಕಟ್ಟೆ ಹೂಡಿಕೆಗಳಿಗೆ 0.02% ರಷ್ಟು ಕಡಿಮೆ ಶುಲ್ಕ ಇರಲಿದೆ.
ಗ್ರಾಹಕರಿಗೆ ಹೊರೆಯಾಗದಂತೆ ಕ್ರಮ: ಯುಪಿಐ ಆ್ಯಪ್‌ಗಳು ತಮ್ಮ ಬಳಕೆದಾರರಿಂದ ಯಾವುದೇ ರೀತಿಯ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪಡೆಯಲು ಅನುಮತಿ ನೀಡಲಾಗಿಲ್ಲ. ಜೊತೆಗೆ, ವರ್ತಕರು ಅಥವಾ ವ್ಯಾಪಾರಿಗಳು ಈ ಎಂಡಿಆರ್ (MDR) ಶುಲ್ಕದ ಹೊರೆಯನ್ನು ಗ್ರಾಹಕರ ಮೇಲೆ ಹಾಕದಂತೆ ಬ್ಯಾಂಕ್‌ಗಳು ಕಟ್ಟುನಿಟ್ಟಿನ ನಿಗಾ ವಹಿಸಲಿವೆ. ಸಂಗ್ರಹವಾಗುವ ಒಟ್ಟು ಎಂಡಿಆರ್ ಶುಲ್ಕದಲ್ಲಿ ಶೇ.5 ರಷ್ಟನ್ನು ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿ ವಿಸ್ತರಿಸಲು ಬಳಸಲಾಗುತ್ತದೆ.

