ಸುಳ್ಯ: ಚಿನ್ನಾಭರಣಗಳ ವೈವಿಧ್ಯಮಯ ಆಯ್ಕೆಯೊಂದಿಗೆ ‘ಸ್ವರ್ಣಂ ಜುವೆಲ್ಸ್’ ಎಂಬ ಹೊಸ ಮಳಿಗೆ ಜುಲೈ 7ರಂದು ಸುಳ್ಯದಲ್ಲಿ ಉದ್ಘಾಟನೆಯಾಯಿತು. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಸುಂತೋಡು ಎಂಪೋರಿಯಂನಲ್ಲಿ ಈ ಮಳಿಗೆ ಆರಂಭಗೊಂಡಿದೆ.
ಮುಳಿಯ ಗೋಲ್ಡ್ & ಡೈಮಂಡ್ಸ್ ಮಾಲೀಕರಾದ ಕೇಶವ ಪ್ರಸಾದ್ ಮುಳಿಯ ಹಾಗೂ ಕೃಷ್ಣನಾರಾಯಣ ಮುಳಿಯ ಅವರು ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಅವರು ಡೈಮಂಡ್ ಕೌಂಟರ್ ಉದ್ಘಾಟಿಸಿದರು. ಸೂರಯ್ಯ ಗೌಡ ಅವರು ಚಿನ್ನಾಭರಣ ಕೌಂಟರ್ ಉದ್ಘಾಟನೆ ನೆರವೇರಿಸಿದರು.
ಕೃಷ್ಣವೇಣಿ ಮುಳಿಯ, ಅಶ್ವಿನಿ ಕೃಷ್ಣ ಮುಳಿಯ, ಶ್ರಮಿಕಾ ಸುಂತೋಡು ಅವರು ವಿಶೇಷ ಆಭರಣ ಸರಣಿಯನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪ ಗೌಡ ಹಾಗೂ ಡಾ. ರೇವಂತ್ ಅವರು ಅತಿಥಿಗಳಾಗಿ ಹಾಜರಿದ್ದರು.
ಪಾಲುದಾರರಾದ ಪ್ರವೀಣ್ ಬಿ. ಗೌಡ, ಸಂಜೀವ ಕೆ., ಭವಿತ್ ಯು., ಲೋಕೇಶ್ ಎಂ.ಎಸ್., ಅಶ್ವಿನಿ, ಷಡಾಕ್ಷರಿ, ಗೀತಾ, ಸ್ವಾತಿ ಉಪಸ್ಥಿತರಿದ್ದು, ಸಂಜೀವ್ ಸ್ವಾಗತಿಸಿ, ಪ್ರವೀಣ್ ವಂದನಾ ಸಲ್ಲಿಸಿದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.

ಶುಭಾರಂಭದ ವಿಶೇಷ ಆಫರ್ಗಳು ಮತ್ತು ಸೇವಾ ವೈಶಿಷ್ಟ್ಯಗಳು
ಚಿನ್ನೋದ್ಯಮದಲ್ಲಿ 20 ವರ್ಷಕ್ಕೂ ಅಧಿಕ ಅನುಭವ ಹೊಂದಿರುವ ಪಾಲುದಾರರೊಂದಿಗೆ ಆರಂಭಗೊಂಡಿರುವ ಈ ಹೊಸ ಮಳಿಗೆ, ಗ್ರಾಹಕರಿಗೆ ವೈವಿಧ್ಯಮಯ ವಿನ್ಯಾಸದ ಆಭರಣಗಳೊಂದಿಗೆ ಉತ್ತಮ ಸೇವೆ ನೀಡುವುದಾಗಿ ಭರವಸೆ ನೀಡುತ್ತಿದೆ. ಶುಭಾರಂಭದ ಸಂದರ್ಭದಲ್ಲೇ ವಿಶೇಷ ಆಫರ್ಗಳನ್ನು ಕೂಡಾ ಮಳಿಗೆ ಪ್ರಕಟಿಸಿದೆ. ನಗುಮುಖದ ಸೇವೆ, ಆರ್ಡರ್ ಸ್ಪೆಷಲಿಸ್ಟ್, ಗೋಲ್ಡ್ ಟೆಸ್ಟ್ ಮೆಷಿನ್, ಉಚಿತ ಆಭರಣ ಸರ್ವಿಸ್ ಹಾಗೂ ಡೋರ್ ಡೆಲಿವರಿ ಸೇವೆಗಳನ್ನೂ ಗ್ರಾಹಕರಿಗೆ ಒದಗಿಸುತ್ತಿದೆ. ತುರ್ತು ಅವಶ್ಯಕತೆಯಲ್ಲಿ ಗ್ರಾಹಕರಿಗೆ ಬೇಕಾದ ವಿನ್ಯಾಸದಲ್ಲಿ ಆಭರಣ ತಯಾರಿಸುವ ಸೌಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

