​CWG 2026: ಮೀರಾಬಾಯಿ ಚಾನು ‘ಗೋಲ್ಡನ್ ಹ್ಯಾಟ್ರಿಕ್’; ವೇಟ್‌ಲಿಫ್ಟಿಂಗ್‌ನಲ್ಲಿ ಮೆರೆದ ಭಾರತ!

​CWG 2026: ಮೀರಾಬಾಯಿ ಚಾನು ‘ಗೋಲ್ಡನ್ ಹ್ಯಾಟ್ರಿಕ್’; ವೇಟ್‌ಲಿಫ್ಟಿಂಗ್‌ನಲ್ಲಿ ಮೆರೆದ ಭಾರತ!

​ಗ್ಲ್ಯಾಸ್ಗೋ: ಕಾಮನ್‌ವೆಲ್ತ್ ಗೇಮ್ಸ್ 2026ರ 4ನೇ ದಿನ ಭಾರತೀಯ ವೇಟ್‌ಲಿಫ್ಟರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ತಾರಾ ಲಿಫ್ಟರ್ ಮೀರಾಬಾಯಿ ಚಾನು ಐತಿಹಾಸಿಕ ‘ಗೋಲ್ಡನ್ ಹ್ಯಾಟ್ರಿಕ್’ ಸಾಧನೆ ಮಾಡುವ ಮೂಲಕ ಭಾರತಕ್ಕೆ ಗ್ಲ್ಯಾಸ್ಗೋ ಗೇಮ್ಸ್‌ನ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಚಾನು ಐತಿಹಾಸಿಕ ಸಾಧನೆ​: ಮಹಿಳೆಯರ 48 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಮೀರಾಬಾಯಿ ಚಾನು, 2018 (ಗೋಲ್ಡ್ ಕೋಸ್ಟ್) ಹಾಗೂ 2022 (ಬರ್ಮಿಂಗ್‌ಹ್ಯಾಮ್) ಆವೃತ್ತಿಗಳ ಬಳಿಕ ಇದೀಗ 2026ರಲ್ಲೂ ಸ್ವರ್ಣ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್ ವೇಟ್‌ಲಿಫ್ಟಿಂಗ್‌ನಲ್ಲಿ ಸತತ 3 ಚಿನ್ನ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವೇಟ್‌ಲಿಫ್ಟಿಂಗ್‌ನಲ್ಲಿ ಮತ್ತರಡು ಬೆಳ್ಳಿ​: ಚಾನು ಅವರ ಚಿನ್ನದ ಸಂಭ್ರಮದ ಜೊತೆಗೆ ಪುರುಷರ ವಿಭಾಗದಲ್ಲೂ ಭಾರತಕ್ಕೆ ಎರಡು ಬೆಳ್ಳಿ ಪದಕಗಳು ಲಭಿಸಿವೆ:

  • ಚನಂಬಮ್ ರಿಷಿಕಾಂತ್ ಸಿಂಗ್: 60 ಕೆಜಿ ವಿಭಾಗದಲ್ಲಿ ಒಟ್ಟು 264 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಗೆದ್ದರು.
  • ​ರಾಜಾ ಮುತುಪಾಂಡಿ: 65 ಕೆಜಿ ವಿಭಾಗದಲ್ಲಿ ಒಟ್ಟು 286 ಕೆಜಿ ತೂಕ ಎತ್ತಿ ಬೆಳ್ಳಿ ಪದಕಕ್ಕೆ ಭಾಜನರಾದರು.

ಈ ಮೂಲಕ 4ನೇ ದಿನದ ಅಂತ್ಯಕ್ಕೆ ಭಾರತವು ಒಟ್ಟು 1 ಚಿನ್ನ, 2 ಬೆಳ್ಳಿ ಮತ್ತು 1 ಕಂಸ್ಯ ಪದಕದೊಂದಿಗೆ ಪದಕಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ