ನೇಪಾಳದಲ್ಲಿ ಭೀಕರ ದಿಢೀರ್ ಪ್ರವಾಹ: 160 ಜನರ ಸಾವು; 133 ಭಾರತೀಯರು ಸೇರಿ 750ಕ್ಕೂ ಹೆಚ್ಚು ಮಂದಿ ನಾಪತ್ತೆ!

ನೇಪಾಳದಲ್ಲಿ ಭೀಕರ ದಿಢೀರ್ ಪ್ರವಾಹ: 160 ಜನರ ಸಾವು; 133 ಭಾರತೀಯರು ಸೇರಿ 750ಕ್ಕೂ ಹೆಚ್ಚು ಮಂದಿ ನಾಪತ್ತೆ!

ಕಾಠ್ಮಂಡು(ಆ. 27) : ನೆರೆಯ ನೇಪಾಳದಲ್ಲಿ ಹಿಮಪಾತ ಹಾಗೂ ಭೂಕಂಪದ ಬೆನ್ನಲ್ಲೇ ಸಂಭವಿಸಿದ ಪ್ರಳಯಾಂತಕ ದಿಢೀರ್ ಪ್ರವಾಹ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮಧ್ಯ ನೇಪಾಳದಲ್ಲಿ ಪ್ರವಾಹದ ಅಬ್ಬರಕ್ಕೆ ಇದುವರೆಗೆ ಕನಿಷ್ಠ 160 ಜನರು ಸಾವನ್ನಪ್ಪಿದ್ದು, 133 ಭಾರತೀಯರು ಸೇರಿದಂತೆ 750ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

ಟಿಬೆಟ್‌ ಮೂಲದಿಂದ ಉದ್ಭವಿಸಿದ ಈ ಭೀಕರ ಜಲಪ್ರಳಯವು ನೇಪಾಳದ ಹಲವು ನಗರ ಹಾಗೂ ಹಳ್ಳಿಗಳನ್ನು ಸಂಪೂರ್ಣವಾಗಿ ಕೊಚ್ಚಿಹಾಕಿದೆ. ನೂರಾರು ಮನೆಗಳು, ಸೇತುವೆಗಳು ಮತ್ತು ಪ್ರಮುಖ ಜಲವಿದ್ಯುತ್ ಯೋಜನೆಗಳು ನೀರಿನಲ್ಲಿ ಕೊಚ್ಚಿಹೋಗಿವೆ.

ಭೂಕಂಪ ಬೆನ್ನಲ್ಲೇ ಸಂಭವಿಸಿತೇ ಹಿಮನದಿ ಸ್ಫೋಟ? ​ನೇಪಾಳದ ವಿದೇಶಾಂಗ ಸಚಿವ ಶಿಶಿರ ಖನಾಲ್ ಅವರು ಸಂಸತ್ತಿಗೆ ಮಾಹಿತಿ ನೀಡಿ, ಟಿಬೆಟ್ ಪ್ರದೇಶದಲ್ಲಿ ಬೆಳಿಗ್ಗೆ 8:37ಕ್ಕೆ ಭೂಕಂಪ ಸಂಭವಿಸಿತ್ತು. ಅದರ ಬೆನ್ನಲ್ಲೇ ಮೂರೇ ನಿಮಿಷಗಳಲ್ಲಿ ಅಂದರೆ 8:40ರ ಸುಮಾರಿಗೆ ಭೀಕರ ಪ್ರವಾಹ ಕಾಣಿಸಿಕೊಂಡಿದೆ. ಭೂಕಂಪದ ಕಂಪನದಿಂದಾಗಿ ಹಿಮನದಿಗಳು ಸ್ಫೋಟಗೊಂಡು ಈ ಭೀಕರತೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಚೀನಾ ಗಡಿಯಲ್ಲೂ ಜೀವಹಾನಿ: ​ನೇಪಾಳ ಪೊಲೀಸರ ಸಾಮಾಜಿಕ ಮಾಧ್ಯಮ ಮಾಹಿತಿಯ ಪ್ರಕಾರ ನೇಪಾಳದಲ್ಲೇ 157 ಮಂದಿ ಮೃತಪಟ್ಟಿದ್ದಾರೆ. ಚೀನಾದ ಗಡಿ ಭಾಗದಲ್ಲೂ ಪ್ರವಾಹದ ಪ್ರಭಾವ ತಟ್ಟಿದ್ದು, ಅಲ್ಲಿ 3 ಜನರು ಮೃತಪಟ್ಟು 265 ಜನರು ನಾಪತ್ತೆಯಾಗಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

ಪ್ರವಾಹದ ಭೀಕರತೆಗೆ ಕಲ್ಲು, ಮಣ್ಣು ಹಾಗೂ ಅವಶೇಷಗಳನ್ನೊಳಗೊಂಡ ನೀರು ನದಿ ದಂಡೆಯಲ್ಲಿದ್ದ ಬೃಹತ್ ಕಟ್ಟಡಗಳನ್ನು ನೆಲಸಮಗೊಳಿಸಿದೆ. ಪ್ರಸ್ತುತ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, 30ಕ್ಕೂ ಹೆಚ್ಚು ಗಂಭೀರ ಗಾಯಾಳುಗಳು ಕಾಠ್ಮಂಡುವಿನ ತ್ರಿಭುವನ್ ವಿಶ್ವವಿದ್ಯಾಲಯ ಶಿಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

133 ಭಾರತೀಯ ಯಾತ್ರಿಕರು ನಾಪತ್ತೆ: ಹೆಲ್ಪ್‌ಲೈನ್ ಸಂಖ್ಯೆ ಬಿಡುಗಡೆ​ನಾಪತ್ತೆಯಾಗಿರುವ ಭಾರತೀಯರಲ್ಲಿ ಕನಿಷ್ಠ 50 ಮಂದಿ ‘ಕೈಲಾಸ ಮಾನಸಸರೋವರ ಯಾತ್ರೆ’ಗೆ ತೆರಳಿದ್ದ ಯಾತ್ರಿಕರಾಗಿದ್ದಾರೆ. ಇವರಲ್ಲದೆ ಅಮೆರಿಕ, ಮಲೇಷ್ಯಾ, ಯುಕೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನೆದರ್ಲ್ಯಾಂಡ್ಸ್ ಮೂಲದ ಪ್ರವಾಸಿಗರೂ ನಾಪತ್ತೆಯಾಗಿದ್ದಾರೆ.

ಭಾರತದಿಂದ ತಕ್ಷಣದ ಮಾನವೀಯ ನೆರವು: ​ಘಟನೆ ತಿಳಿಯುತ್ತಿದ್ದಂತೆಯೇ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೇಪಾಳ ಪ್ರಧಾನಿ ಬಲೇಂದ್ರ ಶಾ ಅವರೊಂದಿಗೆ ಮಾತುಕತೆ ನಡೆಸಿ, ಎಲ್ಲಾ ರೀತಿಯ ಮಾನವೀಯ ನೆರವು ಹಾಗೂ ರಕ್ಷಣಾ ಸಹಕಾರದ ಭರವಸೆ ನೀಡಿದ್ದಾರೆ. ಭಾರತವು ಈಗಾಗಲೇ ಮೊದಲ ಕಂತಿನ ಪರಿಹಾರ ಸಾಮಗ್ರಿಗಳನ್ನು ನೇಪಾಳಕ್ಕೆ ರವಾನಿಸಿದೆ.

ಅಂತರಾಷ್ಟ್ರೀಯ ಅಪಘಾತ ರಾಷ್ಟ್ರೀಯ ಹವಾಮಾನ ವರದಿ