


ಅಡಿಕೆಗೆ ರೋಗಗಳು ಭಾದೆಯ ಗಣ್ಯ ಮದ್ಯೆ ಗಿಡವನ್ನು ಹಾಗೂ ಫಸಲನ್ನು ಉಳಿಸಿಕೊಳ್ಳುವುದೆಂದರೆ ಕೃಷಿಕನಿಗೆ ಇನ್ನಿಲ್ಲದ ಸಂಕಷ್ಟ, ಮಳೆ ಬಂತೆದರೆ ಅಡಿಕೆಗೆ ಕೊಳೆರೋಗದ ಹಾವಳಿಯಿಂದ ಅಡಿಕೆ ಬೆಳೆಗಾರ ಕಂಗಾಲಾಗುತ್ತಾನೆ. ಈ ಆತಂಕ ನಡುವೆ ರೈತ ನಂಬಿರುವ ವ್ಯಕ್ತಿಗಳೆಂದರೆ ಕೆಲಸಗಾರರು, ಆದರೆ ಈ ಕೆಲಸಗಾರರನ್ನು ಹುಡುಕುವುದೇ ದೊಡ್ಡ ಕೆಲಸ, ಹಾಗೂ ಹೀಗೂ ಹುಡುಕಿ ಹಿಡಿದು ಕೆಲಸಕ್ಕೆ ಕರೆದು ಅವರಿಗೋಸ್ಕರ ತಿಂಡಿ ಊಟವನ್ನು ಮಾಡಿಟ್ಟಿದ್ದೀರಾ…ನೀವು ಸೋತಂತೆ ಅಂದು ಅವರು ಬರುವುದೇ ಇಲ್ಲ…ಬರುವುದಿಲ್ಲ ಎಂದು ತಿಳಿಸುವುದೂ ಇಲ್ಲ ..ಕೃಷಿಕ ಕೇಳಿದ ಮೇಲಷ್ಟೆ ಕೆಲಸಗಾರನ ಗೈರು ಕೃಷಿಕನ ಅರಿವಿಗೆ ಬರುತ್ತದೆ.ಇದರಿಂದ ಅಡುಗೆಯೂ ವ್ಯರ್ಥ, ಸಮಯವೂ ವ್ಯರ್ಥ, ನೆಮ್ಮದಿಯೂ ವ್ಯರ್ಥ , ಜೊತೆಗೆ ರೋಗ ಹರಡುವಿಕೆಯ ಭೀತಿ ಕೃಷಿಕನನ್ನು ಕಾಡದೆಬಿಡಲಾರದು.



ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ವೆಂಬಂತೆ ಹಾಸನ ಮೂಲದ ಹೈಟೆಕ್ ದೋಂಟಿ ಖ್ಯಾತಿಯ ಬಾಲಸುಬ್ರಹ್ಮಣ್ಯ ಇವರು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಿದ್ದ ಪಡಿಸಿದ ಪೈಬರ್ ದೋಂಟಿ ಕೃಷಿಕನ ನೆರವಿಗೆ ಬಂದಿದೆ , ಇದರ ಮುಖೇನ ಅಡಿಕೆ ಮರ 90 ಅಡಿಗೂ ಎತ್ತರವಾಗಿದ್ದರೂ ಅಥವಾ ಗಿಡವಾಗಿದ್ದರೂ ಮನೆಯವರೆ ಅಡಿಕೆ ಮರವನ್ನು ಹತ್ತದೇ ನೆಲದಿಂದಲೇ ಔಷದ ಸಿಂಪಡಿಸಬಹುದಾಗಿದೆ .ಮತ್ತು 80 ಅಡಿ ಎತ್ತರದಿಂದ ಕೊಯ್ಲು ಮಾಡಬಹುದಾಗಿದೆ.ಇದರಿಂದ ಸಮಯ ,ಹಣ , ಕೂಲಿಯ ಸಂಬಳ ಉಳಿತಾಯ ಜೊತೆಗೆ ಅಪಾರ ಮಾನಸಿಕ ನೆಮ್ಮದಿ ,ತನ್ನ ತೋಟವನ್ನು ಯಾರ ನೆರವಿಲ್ಲದೆ ತಾನೇ ಔಷದ ಸಿಂಪಡಿಸಿ ರಕ್ಷಣೆ ಮಾಡಿದ ಸಂತೋಷ ಕೃಷಿಕನದ್ದಾಗಬಲ್ಲದು. ಮಲೆನಾಡು ಕರವಾಳಿ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುವುದರಿಂದ , ವರ್ಷಕ್ಕೆ ಮೂರರಿಂದ ನಾಲ್ಕು ಬಾರೀ ಔಷದ ಸಿಂಪಡಿಸಬೇಕಾಗುತ್ತದೆ, ಎಲ್ಲಾ ಸಂದರ್ಭ ಧೋಂಟಿ ಬಳಸಿ ಔಷದ ಸಿಂಪಡಣೆ ಸಾವಿರಾರು ರೂಪಾಯಿಗಳನ್ನು ರೈತರಿಗೆ ಉಳಿಸಲು ಸಹಕಾರಿಯಾಬಲ್ಲದು. ಬಾಲಸುಬ್ರಹ್ಮಣ್ಯರವರು ಅಮೇರಿಕದಲ್ಲಿ ಇಂಜಿನಿಯರ್ ಆಗಿ ಕೆಲಸವನ್ನು ಮಾಡುತ್ತಾ ಕೈ ತುಂಬಾ ಸಂಪಾದಿಸುತ್ತಿದ್ದರೂ ಕೂಡಾ ಅವರ ತುಡಿತ ತನ್ನ ಊರಿನ ರೈತರ ಪರವಾಗಿತ್ತು , ತನ್ನ ಊರಿನ ರೈತರ ಭವಣೆ ಹಾಗೂ ಕಾರ್ಮಿಕರ ಸಮಸ್ಯೆಯನ್ನು ಮನಗಂಡು ಊರಿನಲ್ಲಿ ಸಂಶೋಧನೆ ನಡೆಸಿ ದೋಂಟಿಯ ಮುಖೇನ ಔಷದ ಸಿಂಪಡಿಸುವ ಸುಲಭ ಸಾಧನವನ್ನು ಕಂಡು ಹಿಡಿದರು.

ರಾಜ್ಯದಾಧ್ಯಂತ ಸಾವಿರಾರು ರೈತರು ಇವರ ವಿಶೇಷ ತಂತ್ರಜ್ಞಾನದ ದೋಂಟಿ ಬಳಸಿ ಸ್ವಾವಲಂಭನೆಯ ಕೃಷಿಯಲ್ಲಿ ನಿಟ್ಟುಸಿರು ಬಿಡುತ್ತಿದ್ದಾರೆ.ದೊಂಟಿಯಲ್ಲಿ ಅಡಿಕೆ ಮಾತ್ರವಲ್ಲದೆ, ತೆಂಗಿನಕಾಯಿ ಪಸಲು ಕೊಯ್ಯಲು, ಔಷದ ಸಿಂಪಡಿಸಲು , ಅಲ್ಲದೆ , ಕಾಳು ಮೆಣಸು, ಗೇರು ತೋಟಗಳಿಗೆ ಔಷದವನ್ನು ಸಿಂಪಡಿಸಬಹುದಾಗಿದೆ. ಈ ದೋಂಟಿಯ ಬಗ್ಗೆ ಈಗಾಗಲೆ ಹಲವಾರು ಕಡೆಗಳಲ್ಲಿ ಪ್ರಾತ್ಯಕ್ಷಿಕೆ ಕೊಡಲಾಗಿದೆ. ರೈತರ ತಮ್ಮ ತಮ್ಮ ತೋಟಗಳಲ್ಲಿ ಸುಲಭವಾಗಿ ಸಾಗಿಸಬಹುದಾದ ಸಲಕರಣೆ ಇದಾಗಿದ್ದು, ಬೇಕಾದಾಗ ಔಷದ ಸಿಂಪಡಿಸಲು ವಿಶೇಷ ಸ್ವಿಚ್ ಇದರಲ್ಲಿದೆ, ಇದು ಕಾರ್ಬೋ ದ್ರಾವಣ ಪೋಲಾಗುವುದನ್ನು ಶೇ 100 ರಷ್ಟು ತಡೆಯುತ್ತದೆ, ದೋಂಟಿ ಬಳಸಿ ಸಿಂಪಡಿಸುವಾಗ ಅಡಿಕೆ ಗೊಂಚಲುಗಳಿಗೆ ಹತ್ತಿರವಾಗಿ ಸಿಂಪಡಿಸುವುದರಿಂದ ಔಷದ ಗೊಂಚಲನ್ನು ಪೂರ್ಣ ಪ್ರಮಾಣದಲ್ಲಿ ಆಕ್ರಮಿಸಿ ಕೊಳ್ಳುತ್ತದೆ, ಇದು ರೈತರ ತೋಟವನ್ನು ನೂರು ಪ್ರತಿಃಷತ ರಕ್ಷಣೆ ಮಾಡುತ್ತದೆ. ಇವರ ಈ ವಿಶೇಷ ತಂತ್ರಜ್ಞಾನದ ಬಗ್ಗೆ ಧರ್ಮಸ್ಥಳದ ಆಡಳಿತಧಿಕಾರಿ ಶ್ರೀ ಡಾ. ವೀರೆಂದ್ರ ಹೆಗ್ಗಡೆಯವರು ಮೆಚ್ಚುಗೆ ಮಾತನಾಡಿದ್ದಾರೆ.ಈ ಬಗ್ಗೆ ಮಾತನಾಡಿರುವ ಅವರು ದೇಶೀ ಯುವಕನ ಸಾಧನೆ, ವಿಶ್ವದಲ್ಲೇ ಮನೆ ಮಾತಾಗಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ದೋಂಟಿ ಖರೀದಿಗೆ ಸಬ್ಸಿಡಿ ಲಭ್ಯವಿದ್ದು ಈ ಕೆಳಗಿನಂತೆ ಫಲಾನುಭವಿಗಳಿಗೆ ನೇರ ಸಬ್ಸಿಡಿ ದೊರೆಯಲಿದೆ.
*ರೈತ ವಂತಿಗೆ*
60ft 39500 sc/ladies 45400 general
70ft 46500 sc/ladies 53500 general
80ft 51000 sc/ladies 59000 general
ಈ ರೀತಿಯ ಸುಲಭ್ ಹೈಟೆಕ್ ದೋಂಟಿಯನ್ನು ನೀವು ಖರೀದಿಸಬೇಕೇ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ :ಬಾಲಸುಬ್ರಹ್ಮಣ್ಯ H M Hitech Dhoti 96061 42520 /
72593 50487 /

ಹೈಟೆಕ್ ದೋಟಿ ಖ್ಯಾತಿಯ ಬಾಲಸುಬ್ರಹ್ಮಣ್ಯ ಹೆಚ್ ಎಮ್. ಮತ್ತೊಂದು ಅವಿಷ್ಕಾರ ಮಲ್ಟಿ ಹೆಡ್ ಗ್ರಾಸ್ ಕಟರ್ :
ಕೃಷಿಕರಿಗೆ ಹೊಸ ಅವಿಷ್ಕಾರಗಳ ಮೂಲಕ ಅನುಕೂಲ ಮಾಡಬೇಕು ಎನ್ನುವ ಪರಿಕಲ್ಪನೆಯಿಂದ ಮಲ್ಟಿ ಹೆಡ್ ಗ್ರಾಸ್ ಕಟರ್ ಹುಲ್ಲು ಕೀಳುವ ಯಂತ್ರವನ್ನು ಹೈಟೆಕ್ ದೋಟಿ ಖ್ಯಾತಿಯ ಬಾಲಸುಬ್ರಹ್ಮಣ್ಯ ಹೆಚ್ ಎಮ್ ತಯಾರಿಸಿದ್ದಾರೆ.

ಈ ಹಿಂದೆ ಸಿಂಗಲ್ ಬ್ರಶ್ ಗ್ರಾಸ್ ಕಟರ್ ಇತ್ತು. ಇದರಿಂದ ಹುಲ್ಲು ಕಳೆ ಕಟಾವು ಮಾಡುವುದು ಹಲವು ದಿನಗಳ ಕೆಲಸವಾಗುತ್ತಿತ್ತು. ಬಾಲಸುಬ್ರಹ್ಮಣ್ಯರು ಹೊಸತಾಗಿ ಅವಿಷ್ಕಾರ ಮಾಡಿದ ಮಲ್ಟಿ ಹೆಡ್ ಗ್ರಾಸ್ ಕಟರ್ ನಿಂದ ೨ ದಿನ ಮಾಡುವ ಕೆಲಸವನ್ನು ಒಂದೇ ದಿನದಲ್ಲಿ ಮಾಡಿ ಮುಗಿಸಬಹುದು. ಆಧುನಿಕತೆಯನ್ನು ಬಳಸಿಕೊಂಡು ಡಬಲ್ ಹೆಡ್ ಹೆಡ್ ಗ್ರಾಸ್ ಕಟರ್ ಮತ್ತು ತ್ರಿಬಲ್ ಹೆಡ್ ಗ್ರಾಸ್ ಕಟರ್ ಅನ್ನು ತಯಾರಿಸಲಾಗಿದೆ.
ಸಿಂಗಲ್ ಹೆಡ್ ಗ್ರಾಸ್ ಕಟರ್ ಅನ್ನು ಹೆಗಲ ಮೇಲೆ ಹಾಕಿಕೊಂಡು ಹುಲ್ಲು ಕಟಾವು ಮಾಡುವ ಬದಲಿಗೆ ಕೆಲಸ ಮಾಡುವಾಗ ಹೆಚ್ಚು ತ್ರಾಸವಿಲ್ಲದೆ ಅತೀ ಸುಲಭದಲ್ಲಿ ಹುಲ್ಲು ಕಟಾವು ಮಾಡಬಹುದು. ತ್ರಿಬಲ್ ಹೆಡ್ ಗ್ರಾಸ್ ಕಟರ್ ೩ ಅಡಿಯಷ್ಟು ಜಾಗದ ಹುಲ್ಲನ್ನು ಕಟಾವು ಮಾಡುತ್ತದೆ. ೩ ದಿನ ಮಾಡುವ ಕೆಲಸವನ್ನು ೧ ದಿನವೇ ಮಾಡುವ ವಿಶೇಷ ಸಾಮರ್ಥ್ಯವನ್ನು ಹೊಂದಿದ್ದು ರೈತರಿಗೆ ಅತೀ ಉಪಯುಕ್ತವಾದ ವರದಾನ ಮಲ್ಟಿ ಹೆಡ್ ಗ್ರಾಸ್ ಕಟರ್ ಆಗಿದೆ. ಮಲ್ಟಿ ಹೆಡ್ ಗ್ರಾಸ್ ಕಟರ್ ಬಳಕೆಯಿಂದ ಇಂಧನದ ಉಳಿತಾಯದ ಜೊತೆಗೆ ಸಮಯ, ಕೆಲಸದ ಆಳುಗಳ ಉಳಿತಾಯವೂ ಆಗುತ್ತದೆ. ಬೆಟ್ಟಗುಡ್ಡ ಸಹಿತ ಎಲ್ಲಾ ಜಾಗದಲ್ಲೂ ಉಪಯೋಗಿಸುವಂತೆ ಯಂತ್ರದ ರಚನೆಯನ್ನು ಮಾಡಲಾಗಿದ್ದು ಮಕ್ಕಳು ಮಹಿಳೆಯರು ಸೇರಿ ಯಾರೂ ಕೂಡ ಉಪಯೋಗಿಸಬಹುದಾಗಿದೆ. ಅಡಿಕೆ ತೆಂಗು ಕಾಫಿ ಬಾಳೆ ತೋಟಗಳ ಮತ್ತು ತರಕಾರಿ ಬೆಳೆಯ ಕಳೆ ಹುಲ್ಲನ್ನು ಕೀಳಲು ಅತ್ಯಂತ ಉಪಯುಕ್ತವಾಗಿದೆ. ಮಲ್ಟಿ ಹೆಡ್ ಗ್ರಾಸ್ ಕಟರ್ ನ್ನು ಕೊಂಡು ಬಳಸಿ ಹಣ ಸಮಯ ಎಲ್ಲವನ್ನೂ ಉಳಿಸಿಕೊಂಡು ಉತ್ತಮವಾಗಿ ಕೆಲಸ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಮಲ್ಟಿ ಪರ್ಪಸ್ ಬ್ರಷ್ ಕಟರ್ ನಲ್ಲೆ ಚೈನ್ ಸಾ , ಸ್ಪ್ರೇ ಪಂಪ್ , ಗುಂಡಿ ಹೊಡೆಯುವ ಅಟ್ಯಾಚ್ಮೆಂಟ್ ಕೂಡ ಬರಲಿದೆ.ಹೆಚ್ಚಿನ ಮಾಹಿತಿಗಾಗಿ 9606142520 & 7259350487 ಸಂಪರ್ಕಿಸಬಹುದು.


