ಸಹೋದರಿಯ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೇ ಹಾರ್ಟ್ ಅಟ್ಯಾಕ್ ನಿಂದ 23 ವರ್ಷದ ಯುವತಿ ಸಾವು.

ಸಹೋದರಿಯ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೇ ಹಾರ್ಟ್ ಅಟ್ಯಾಕ್ ನಿಂದ 23 ವರ್ಷದ ಯುವತಿ ಸಾವು.

ಮಧ್ಯಪ್ರದೇಶ: ಸಹೋದರಿಯ ವಿವಾಹ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೇ ಯುವತಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನಪ್ಪಿದ ಘಟನೆ ವಿದಿಶಾ ನಗರದಲ್ಲಿ ನಡೆದಿದೆ.ಮೃತರನ್ನು ಇಂದೋರ್ ನಿವಾಸಿ 23 ವರ್ಷದ ಪರಿಣಿತಾ ಜೈನ್ ಎಂದು ಗುರುತಿಸಲಾಗಿದೆ.

ಇವರು ಫೆಬ್ರವರಿ 8 ರಂದು ತಮ್ಮ ಸೋದರ ಸಂಬಂಧಿ ಸಹೋದರಿಯ ಮದುವೆಯ ಸಂಗೀತ್ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ.ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು, ಆದರೆ ಆಕೆ ಅದಾಗಲೇ ಸಾವನಪ್ಪಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರು ಅವಳಿಗೆ ಹೃದಯಾಘಾತವಾಗಿದೆ ಎಂದು ಹೇಳಿದ್ದಾರೆ. ಆದರೆ ಅವಳ ಕುಟುಂಬವು ಅವಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿರಲಿಲ್ಲ ಆರೋಗ್ಯವಾಗಿದ್ದಳು ಎಂದು ತಿಳಿಸಿದೆ ಎಂದು ವರದಿಯಾಗಿದೆ.

ರಾಜ್ಯ