ಸುಳ್ಯ: ಗೂನಡ್ಕದ ಸಜ್ಜನ ಸಭಾಭವನದಲ್ಲಿ ನಡೆಯುತ್ತಿದ್ದ ಮದುವೆಗೆ ಆಗಮಿಸಿದ ವ್ಯಕ್ತಿಯೊಬ್ಬ ಮದುವೆಗೆ ಬಂದು ಮದುವೆ ಹಾಲ್ ನಲ್ಲಿ ಗಲಾಟೆ ಮಾಡಿ ಮಹಿಳೆಗೆ ಇರಿಯಲು ಯತ್ನಿಸಿ, ಹಾಲ್ ನಿಂದ ರಸ್ತೆಗೆ ಬಂದು ರಸ್ತೆ ಬದಿ ತಾನೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದೆ.ಕೂಡಲೇ ಆತನನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.


ಸದ್ಯ ವಿಷ ಸೇವಿಸಿದ ವ್ಯಕ್ತಿಯ ಹೆಸರು ವಸಂತ ಎಂದು ತಿಳಿದು ಬಂದಿದೆ ಆತನ ಊರು ಯಾವುದೆಂದು ಸದ್ಯ ತಿಳಿದು ಬಂದಿಲ್ಲ,ವಿಷ ಸೇವಿಸಿ ಬಿದ್ದಿದ್ದ ವಸಂತ್ ನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಆತನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.