ವಹೀದ ಆರಿಸ್ ತೆಕ್ಕಿಲ್ ಕೆಪಿಸಿಸಿ ಕಾನೂನು ಮಾನವ ಹಕ್ಕುಗಳ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ನೇಮಕ:

ವಹೀದ ಆರಿಸ್ ತೆಕ್ಕಿಲ್ ಕೆಪಿಸಿಸಿ ಕಾನೂನು ಮಾನವ ಹಕ್ಕುಗಳ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ನೇಮಕ:

 ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಾಂಗ್ರೇಸ್  ಕಾನೂನು ಮತ್ತು ಮಾನವ ಹಕ್ಕುಗಳ ರಾಜ್ಯಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿ ದುಡಿಯುತ್ತಿರುವ ವಹೀದ ಆರಿಸ್ ತೆಕ್ಕಿಲ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ಆದೇಶದ ಮೇರೆಗೆ ರಾಜ್ಯಾಧ್ಯಕ್ಷರಾದ ಎ ಎಸ್ ಪೊನ್ನಣ್ಣ ನೇಮಕಗೋಳಿಸಿದ್ದಾರೆ. ಬೆಂಗಳೂರಿನಲ್ಲಿ ಉಚ್ಛ ನ್ಯಾಯಾಲಯ ನ್ಯಾಯವಾದಿಯಾಗಿ ಹದಿನೆಂಟು ವರ್ಷಗಳಿಂದ ದುಡಿಯುತ್ತಿರುವ ವಹೀದ ಆರಿಸ್  ಬೆಂಗಳೂರಿನ ಫಾರ್ಮಡ್ ಗ್ರೂಪ್ ಮಾನವ ಸಂಪಸ್ಮೂಲದ ವಿಭಾಗದ ಜನರಲ್ ಮ್ಯಾನೇಜರ್ ಆಗಿ ದುಡಿಯುತ್ತಿರುವ ಸಂಪಾಜೆ ಗ್ರಾಮದ ಪೇರಡ್ಕ ತೆಕ್ಕಿಲ್ ಮೂಸನ್ ಹಾಜಿ ಯವರ ಪುತ್ರ ತೆಕ್ಕಿಲ್ ಆರಿಸ್ ಪೇರಡ್ಕ ಅವರ ಪತ್ನಿಯಾಗಿದ್ದು ಪ್ರಸ್ತುತ ಬೆಂಗಳೂರಿನ ರಾಮ್ ಮೂರ್ತಿ ನಗರದಲ್ಲಿ ವಾಸವಾಗಿದ್ದಾರೆ  ಪುತ್ರ ಅರ್ಮನ್ ಆರಿಸ್ ತೆಕ್ಕಿಲ್ ಮತ್ತು ಪುತ್ರಿ ಅರ್ವ ಆರಿಸ್ ತೆಕ್ಕಿಲ್ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಾಗಿದ್ದಾರೆ.
ರಾಜ್ಯ