ಧರ್ಮಸ್ಥಳ ಬಂಗಲೆ ಗುಡ್ಡೆ ರಹಸ್ಯ ರೋಚಕ ತಿರುವು ಪಡೆಯುತ್ತಿದೆ ನಿನ್ನೆ ಮತ್ತು ಮೊನ್ನೆ ಎಸ್ ಐ ಟಿ ತಂಡ ಸೌಜನ್ಯ ಮಾವ ವಿಠಲ್ ಗೌಡರನ್ನು ಸ್ಥಳ ಮಹಜರಿಗೆ ಬಂಗಲೆ ಗುಡ್ಡಕ್ಕೆ ಕರೆದು ಕೊಂಡು ಹೋಗಿದೆ ಅದರ ಕುರಿತು ಇಂದು ವಿಡಿಯೋ ಮೂಲಕ ಮಾತನಾಡಿದ ವಿಠಲ್ ಗೌಡ ಅಲ್ಲಿ 10 ಅಡಿ ಅಂತರದಲ್ಲಿ ರಾಶಿ ರಾಶಿ ಆಸ್ತಿ ಪಂಜರ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ವಾಮಾಚಾರಕ್ಕೆ ಬಳಸುವ ಮಡಿಕೆ ಕುಡಿಕೆಗಳು ಕೂಡ ಪತ್ತೆಯಾಗಿದ್ದು ಕೆಲವು ಅಸ್ತಿ ಪಂಜರಗಳು ನೆಲದ ಮೇಲೆ ಇದೆ ಮತ್ತು ಕೆಲವು ಮಣ್ಣಿನಲ್ಲಿ ಹೂತ ಸ್ಥಿತಿಯಲ್ಲಿ ಇದೆ. ಒಂದು ಮಗುವಿನ ಅಸ್ತಿ ಪಂಜರ ಕೂಡ ಪತ್ತೆ ಯಾಗಿದ್ದು ಈ ಹಿಂದೆ ಚಿನ್ನಯ್ಯ ಹೇಳಿದ ಎಲ್ಲಾ ವಿಷಯಗಳು ಸತ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಎಸ್ ಐ ಟಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದು ಯಾವುದೇ ಸಮಯದಲ್ಲಿ ವಿಚಾರಣೆಗೆ ಬರಲು ಸಿದ್ಧ ಎಂದು ಎಸ್ ಐ ಟಿ ಗೆ ತಿಳಿಸಿರುವುದಾಗಿ ಹೇಳಿದ್ದಾರೆ. ಕ್ಷಣ ಕ್ಷಣಕ್ಕೂ ಒಂದೊಂದು ರಹಸ್ಯ ಹೊರಗೆ ಬರುತ್ತಿರುವ ಈ ತನಿಖೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

