ನಟ ಉಪೇಂದ್ರ ದಂಪತಿಗಳ ಫೋನ್ ಹ್ಯಾಕ್ – 55 ಸಾವಿರ ರೂಪಾಯಿಗೆ ಬೇಡಿಕೆ

ನಟ ಉಪೇಂದ್ರ ದಂಪತಿಗಳ ಫೋನ್ ಹ್ಯಾಕ್ – 55 ಸಾವಿರ ರೂಪಾಯಿಗೆ ಬೇಡಿಕೆ

ಸ್ಯಾಂಡಲ್‌ವುಡ್ ನಟ ಉಪೇಂದ್ರ ಹಾಗೂ ಅವರ ಪತ್ನಿಯ ಫೋನ್‌ಗಳನ್ನು ಸೈಬರ್ ಅಪರಾಧಿಗಳು ಹ್ಯಾಕ್ ಮಾಡಿದ್ದಾರೆ. ಈ ಕುರಿತು ಉಪೇಂದ್ರ ಹೇಳಿದಂತೆ, ಅವರ ಪತ್ನಿಗೆ ಬಂದ ಕರೆ ವೇಳೆ ಕೆಲವು ಕೋಡ್ ನಮೂದಿಸಲು ಹೇಳಲಾಗಿದ್ದು, ಆ ಕೋಡ್ ನಮೂದಿಸಿದ ತಕ್ಷಣ ಪತ್ನಿಯ ಫೋನ್ ಮಾತ್ರವಲ್ಲ, ತಮ್ಮ ಫೋನ್ ಕೂಡ ಹ್ಯಾಕ್ ಆಗಿದೆ.

ಹ್ಯಾಕ್ ಆದ ನಂತರ, ಅಪರಾಧಿಗಳು ಅವರ ಸಂಪರ್ಕದಲ್ಲಿರುವ ಹಲವರಿಂದ ₹55,000 ಹಣವನ್ನು ಬೇಡಿದ್ದಾರೆ ಎನ್ನಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಪೇಂದ್ರ, ಜನರಿಗೆ ಎಚ್ಚರಿಕೆ ನೀಡಿದ್ದು, ಇಂತಹ ಮೋಸ ಕರೆಗಳಿಗೆ ಬಲಿಯಾಗದಂತೆ ಜಾಗರೂಕತೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.

ಅಪರಾಧ ರಾಜ್ಯ