🌐 ಕೆಂಪು ಸಮುದ್ರದ ಕೇಬಲ್ ಕಡಿತದ ಪರಿಣಾಮ – ಭಾರತದ ಇಂಟರ್ನೆಟ್ ವೇಗ ಕುಂಠಿತ!

🌐 ಕೆಂಪು ಸಮುದ್ರದ ಕೇಬಲ್ ಕಡಿತದ ಪರಿಣಾಮ – ಭಾರತದ ಇಂಟರ್ನೆಟ್ ವೇಗ ಕುಂಠಿತ!

ಜಾಗತಿಕ ಇಂಟರ್ನೆಟ್ ಸಂಪರ್ಕ ವ್ಯವಸ್ಥೆಗೆ ಭಾರೀ ಹೊಡೆತ ಬಿದ್ದಿದೆ. ಕೆಂಪು ಸಮುದ್ರ ಪ್ರದೇಶದಲ್ಲಿ ಪ್ರಮುಖ ಸಬ್‌ಮೆರೈನ್ ಕೇಬಲ್‌ಗಳು ಹಾನಿಗೊಳಗಾಗಿದ್ದು, ಇದರ ಪರಿಣಾಮವಾಗಿ ಭಾರತದ ಇಂಟರ್ನೆಟ್ ಸಾಮರ್ಥ್ಯವು ಕೇವಲ 41% ಇಳಿದಿದೆ ಎಂದು ವರದಿಯಾಗಿದೆ.

ಇದರಿಂದಾಗಿ ಮುಂದಿನ ಕೆಲವು ವಾರಗಳಲ್ಲಿ ಇಂಟರ್ನೆಟ್ ವೇಗ ಕುಂಠಿತವಾಗುವುದು, ಸಂಪರ್ಕದಲ್ಲಿ ಅಡೆತಡೆ ಉಂಟಾಗುವುದು ಹಾಗೂ ಸರ್ವರ್ ಸಮಸ್ಯೆಗಳು ಎದುರಾಗುವುದು ಖಚಿತ. ತಜ್ಞರ ಪ್ರಕಾರ, ಹಾನಿಗೊಂಡ ಕೇಬಲ್‌ಗಳ ದುರಸ್ತಿ ಪ್ರಕ್ರಿಯೆ ಹಲವಾರು ವಾರಗಳ ಕಾಲ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಈ ಅಸಮರ್ಪಕ ಪರಿಸ್ಥಿತಿ ಜಾಗತಿಕ ಸಂಪರ್ಕದ ಬೆನ್ನೆಲುಬಾದ ಇಂಟರ್ನೆಟ್ ಮೂಲಸೌಕರ್ಯ ಎಷ್ಟು ನಾಜೂಕಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

ಅಂತರಾಷ್ಟ್ರೀಯ ತಂತ್ರಜ್ಞಾನ