ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ಆಗಿರುವ ನಟ ದರ್ಶನ್ ಇಂದು ವಿಡಿಯೋ ಕಾನ್ಫರೆನ್ಸ್ ಮುಖಾಂತರ 64ನೇ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ಮುಂದೆ ಹಾಜರಾದರು. ಈ ಸಂದರ್ಭದಲ್ಲಿ ಜೈಲಿನಲ್ಲಿನ ತಮ್ಮ ಸ್ಥಿತಿಗತಿಗಳ ಬಗ್ಗೆ ಹೇಳಿ ಕಣ್ಣೀರಾದರು.
“ಅನೇಕ ದಿನಗಳಿಂದ ಸೂರ್ಯನ ಬೆಳಕೇ ಕಾಣುತ್ತಿಲ್ಲ. ಕೈಗಳಲ್ಲಿ ಫಂಗಸ್ ಬಂದಿದೆ, ಬಟ್ಟೆಗಳಲ್ಲಿ ದುರ್ವಾಸನೆ ಬರುತ್ತಿದೆ. ಇಂತಹ ಜೀವನ ಅಸಹ್ಯವಾಗುತ್ತಿದೆ. ದಯವಿಟ್ಟು ವಿಷ ಕೊಡಿ, ನಾನು ಇನ್ನು ಬದುಕಲು ಬಯಸುವುದಿಲ್ಲ,” ಎಂದು ದರ್ಶನ್ ನ್ಯಾಯಾಧೀಶರಿಗೆ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಅಂಥದ್ದನ್ನು ಮಾಡಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
2024ರ ಡಿಸೆಂಬರ್ನಲ್ಲಿ ಕರ್ನಾಟಕ ಹೈಕೋರ್ಟ್ ದರ್ಶನ್ಗೆ ಜಾಮೀನು ನೀಡಿದ್ದರೂ, ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಆಗಸ್ಟ್ 14, 2025ರಂದು ಜಾಮೀನು ರದ್ದುಪಡಿಸಿ ಮರುಬಂಧನಕ್ಕೆ ಆದೇಶಿಸಿತ್ತು.
🔸 ಬಳ್ಳಾರಿ ಜೈಲಿಗೆ ವರ್ಗಾವಣೆಯ ಆಗುವುದರಿಂದ ದರ್ಶನ ಪಾರು.
ದರ್ಶನ್ ಬೇಡಿಕೆಯಂತೆ ದಿಂಬು – ಹಾಸಿಗೆ, ಹಾಗೂ ವಾಕಿಂಗ್ ಗೆ ಅವಕಾಶ ಜೊತೆಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಜೈಲು ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿದೆ. ಇದರೊಂದಿಗೆ ದರ್ಶನ್ ಬಳ್ಳಾರಿ ಜೈಲು ವರ್ಗಾವಣೆಯಿಂದ ತಪ್ಪಿಸಿಕೊಂಡಿದ್ದಾರೆ.

