14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ : ರಾಜ್ಯದಲ್ಲಿ ಶೇ.64.57ರಷ್ಟು ಮತದಾನ :ದಕ್ಷಿಣ ಕನ್ನಡ-ಶೇ.72.30 ರಷ್ಟು ಮತದಾನ

14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ : ರಾಜ್ಯದಲ್ಲಿ ಶೇ.64.57ರಷ್ಟು ಮತದಾನ :ದಕ್ಷಿಣ ಕನ್ನಡ-ಶೇ.72.30 ರಷ್ಟು ಮತದಾನ

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.64.57ರಷ್ಟು ಮತದಾನ ಆಗಿದೆ. ಈ ಪೈಕಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಶೇ.74.87ರಷ್ಟು ಮತದಾನ ಆಗಿದ್ದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಶೇ.49.37ರಷ್ಟು ಮತದಾನವಾಗಿದೆ.

ಮಂಡ್ಯ-ಶೇ.74.87, ಕೋಲಾರ-ಶೇ.73.25, ಉಡುಪಿ ಚಿಕ್ಕಮಗಳೂರು-ಶೇ.72.69, ದಕ್ಷಿಣ ಕನ್ನಡ-ಶೇ.72.30, ಹಾಸನ-ಶೇ.72.13, ತುಮಕೂರು-ಶೇ.72.10, ಚಿಕ್ಕಬಳ್ಳಾಪುರ-ಶೇ.71.85, ಚಾಮರಾಜನಗರ-ಶೇ.69.86, ಚಿತ್ರದುರ್ಗ-ಶೇ.67.52, ಮೈಸೂರು-ಶೇ.67.55, ಬೆಂಗಳೂರು ಗ್ರಾಮಾಂತರ-ಶೇ.61.78, ಬೆಂಗಳೂರು ಉತ್ತರ-ಶೇ.51.51, ಬೆಂಗಳೂರು ಕೇಂದ್ರ-ಶೇ.49.77 ಹಾಗೂ ಬೆಂಗಳೂರು ದಕ್ಷಿಣ-ಶೇ.49.37ರಷ್ಟು ಮತದಾನವಾಗಿದೆ

ರಾಜ್ಯ