ಒಂದೆಡೆ ಬರೆ ಕುಸಿದು ಅಪಾಯದ ದಾರಿಯಾದ ಬಸ್ಮಡ್ಕ ರಸ್ತೆ ನಿನ್ನೆಯ ಮಳೆಗೆ ಮತ್ತೊಂದೆಡೆ ಕೊಚ್ಚಿ ಹೋಗಿದೆ. ರಸ್ತೆಯಲ್ಲಿ ತಾತ್ಕಾಲಿಕವಾಗಿ ಹಾಕಿದ್ದ ಜಲ್ಲಿ ಕಲ್ಲುಗಳು ಕೊಚ್ಚಿ ಹೋಗಿ ಕಾಂಕ್ರಿಟ್ ರಸ್ತೆಯ ಮೇಲೆ ನಿಂತು ಬೈಕ್ ಸವಾರರಿಗೆ ಅಪಾಯ ಉಂಟುಮಾಡುವ ಸ್ಥಿತಿಯಲ್ಲಿದೆ.







ಬೈಕ್ ಸವಾರರು ಜಾಗರೂಕತೆ ವಹಿಸದಿದ್ದರೆ ಪ್ರಾಣಕ್ಕೆ ಆಪತ್ತು ಖಂಡಿತ. ಈ ವಾರ್ಡ್ ನಲ್ಲಿ 30 ವರ್ಷಕ್ಕಿಂತ ಹೆಚ್ಚು ಒಂದೇ ಪಕ್ಷದ ಜನ ಪ್ರತಿನಿಧಿಗಳು ಗೆಲ್ಲುತ್ತಾ ಬಂದಿದ್ದು ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಇನ್ನಾದರೂ ಜನರು ಎಚ್ಚೆತ್ತು ಉತ್ತಮ ಯೋಗ್ಯ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಸ್ಥಳೀಯ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


