ಅಜ್ಜಾವರ ಕಾಂಗ್ರೇಸ್ ನಾಯಕ ಸುಧೀರ್ ರೈ ಮೇನಾಲ ನಿಧನ.

ಅಜ್ಜಾವರ ಕಾಂಗ್ರೇಸ್ ನಾಯಕ ಸುಧೀರ್ ರೈ ಮೇನಾಲ ನಿಧನ.

ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ, ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಸುಧೀರ್ ರೈ ಮೇನಾಲ ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಅವರಿಗೆ 48 ವರ್ಷ ವಯಸ್ಸಾಗಿತ್ತು.
ಮೂರು ದಿನಗಳ ಹಿಂದೆ ಅಜ್ಜಾವರ ತೆರಳುವ ಮಾರ್ಗ ಮದ್ಯೆ ತರಕಾರಿ , ಹೂ ಗಳಿಗೆ ಬಿಡವಂತ ವಿಷ ಸೇವನೆ ಮಾಡಿ ಮನೆಗೆ ಹೋಗಿದ್ದರು ಅಲ್ಲಿ ಅವರು ಅಲ್ಲಿ ವಿಷ ಸೇವಿಸಿ ವಿಷಯ ಮನೆಯವರಿಗೆ ತಿಳಿಯುತ್ತದ್ದಂತೆ
ಅಸ್ವಸ್ಥಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ
ದಾಖಲಿಸಲಾಗಿತ್ತು. ಕಳೆದೆರಡು ದಿನಗಳಿಂದ ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೆ ಅಲ್ಲಿ ಅವರು ಇಂದು ಮುಂಜಾನೆ ಕೊನೆಯುಸಿರೆಳೆದರು.
ಅಜ್ಜಾವರ ಕಾಂಗ್ರೆಸ್ ನಲ್ಲಿ ಪ್ರಭಾವಿ ನಾಯಕರೆನಿಸಿದ್ದ
ಸುಧೀರ್ ರೈಯವರು ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.ತಮ್ಮ ಮಾತಿನ ಮೂಡಿಯಿಂದ ಪಕ್ಷಾತೀತ ಸಾವಿರಾರು ಗೆಳೆಯರನ್ನು ಸಂಪಾದಿಸಿದ್ದರು, ಇತ್ತೀಚೆಗೆ ಉಂಟಾದ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದರು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ ಹಾಗೂ ಪುತ್ರ, ಕುಟುಂಬಸ್ಥರನ್ನು ಅಗಲಿದ್ದಾರೆ.

ರಾಜ್ಯ