ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ಡಾ. ಅಕ್ಷತಾ ಆದರ್ಶ್ ನೇಮಕ

ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ಡಾ. ಅಕ್ಷತಾ ಆದರ್ಶ್ ನೇಮಕ

ಮಂಗಳೂರು: ದಕ್ಷಿಣ ಕನ್ನಡ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರನ್ನಾಗಿ ಮೂಡಬಿದರೆ ಚೌಟರ ಅರಮನೆ, ನ್ಯಾಯವಾದಿ, ಡಾ. ಅಕ್ಷತಾ ಆದರ್ಶ್ ನೇಮಕಗೊಂಡಿದ್ದಾರೆ.

ಸಮಿತಿಗೆ ಒಬ್ಬರು ಅಧ್ಯಕ್ಷರು ಹಾಗೂ ನಾಲ್ಕು ಜನ ಸದಸ್ಯರನ್ನು ಸರಕಾರ ನೇಮಕ ಮಾಡಿದೆ. ಸಮಿತಿಯ ಸದಸ್ಯರಾಗಿ ಹರೀಶ್ ಎಂ ನಾಗರಿ, ಕಿಶೋರ್ ಕುಂದರ್ ಎಕ್ಕೂರು, ಅಬೂಬಕ್ಕರ್ ಜಿ ಎನ್, ಹರಿಣಿ ಬಿಕರ್ನಕಟ್ಟೆ ಇವರನ್ನು ನೇಮಕಗೊಳಿಸಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ ಸಿ ಬಲರಾಮ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ

ರಾಜ್ಯ