ಭಾರತದ ವನ್ಯಜೀವಿ ಸಂರಕ್ಷಣೆ: ಜಾಗತಿಕ ಮಟ್ಟದಲ್ಲಿ ಮಾದರಿಯಾಗಿರುವ ಹಸಿರು ಕ್ರಾಂತಿ

ಭಾರತದ ವನ್ಯಜೀವಿ ಸಂರಕ್ಷಣೆ: ಜಾಗತಿಕ ಮಟ್ಟದಲ್ಲಿ ಮಾದರಿಯಾಗಿರುವ ಹಸಿರು ಕ್ರಾಂತಿ

ನವದೆಹಲಿ: ಕಳೆದ 12 ವರ್ಷಗಳಲ್ಲಿ, ಭಾರತದ ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿವೆ. ಅಪಾಯದಲ್ಲಿರುವ ಪ್ರಾಣಿಗಳು ಮತ್ತು ಅವರ ಆವಾಸಸ್ಥಳಗಳನ್ನು ರಕ್ಷಿಸಲು ಭಾರತ ಕೈಗೊಂಡಿರುವ ಬದ್ಧತೆಯನ್ನು ಹಲವು ಜಾಗತಿಕ ಸಂಸ್ಥೆಗಳು ಶ್ಲಾಘಿಸಿವೆ. ದೇಶದ ಪರಿಸರ-ಸ್ನೇಹಿ ನೀತಿಗಳು ಮತ್ತು ಸಮುದಾಯದ ಪಾಲ್ಗೊಳ್ಳುವಿಕೆ, ವನ್ಯಜೀವಿಗಳ ನಿರ್ವಹಣೆಗೆ ಹೊಸ ಮಾದರಿಗಳನ್ನು ಸ್ಥಾಪಿಸಿವೆ.

ಭಾರತದ ಪ್ರಮುಖ ವನ್ಯಜೀವಿ ಸಂರಕ್ಷಣಾ ಯೋಜನೆಗಳು:

1. ಪ್ರಾಜೆಕ್ಟ್ ಟೈಗರ್ – ಹುಲಿಗಳ ಭದ್ರತೆಯ ಗಾದಿ

1973 ರಲ್ಲಿ ಪ್ರಾರಂಭವಾದ ಟೈಗರ್ ಯೋಜನೆ ಭಾರತದ ಅತ್ಯಂತ ಯಶಸ್ವೀ ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಒಂದು. ಜಾಗತಿಕ ಹುಲಿ ವೇದಿಕೆ (Global Tiger Forum – GTF) ಇದನ್ನು ಮಾದರಿಯಾಗಿ ಪರಿಗಣಿಸಿದೆ. ಹುಲಿ ರಕ್ಷಿತಾರಣ್ಯಗಳು , ಆಧುನಿಕ ಪತ್ತೆ ವಿಧಾನಗಳು, ಮತ್ತು ಆಕ್ರಮಣ ತಡೆಯುವ ವಿಶೇಷ ಪಡೆ ಹುಲಿಗಳ ಸಂಖ್ಯೆಯಲ್ಲಿನ ಗಣನೀಯ ಏರಿಕೆಗೆ ಕಾರಣವಾಗಿವೆ. ಇಂದು, ಪ್ರಪಂಚದ ಒಟ್ಟು ಹುಲಿಗಳ 70% ಭಾರತದಲ್ಲೇ ವಾಸಿಸುತ್ತವೆ, ಇದು ಸಂರಕ್ಷಣಾ ಯಶಸ್ಸಿನ ಪ್ರಮುಖ ಸಂಕೇತವಾಗಿದೆ.

2. ಪ್ರಾಜೆಕ್ಟ್ ಏಲಿಫಂಟ್ – ಆನೆಗಳ ನಿರ್ವಹಣೆಯಲ್ಲಿ ಸಮುದಾಯದ ಪಾತ್ರ

1992 ರಲ್ಲಿ ಆರಂಭವಾದ ಏಲಿಫಂಟ್ ಯೋಜನೆ ಆನೆಗಳನ್ನು ಸಂರಕ್ಷಿಸಲು ಮಾನವ-ಆನೆ ಸಂಘರ್ಷ ಕಡಿಮೆ ಮಾಡುವ, ಅವುಗಳ ಆವಾಸಸ್ಥಳಗಳನ್ನು ಸುಧಾರಿಸುವ, ಮತ್ತು ಅಕ್ರಮ ಬೇಟೆ ತಡೆಯುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆ ದಕ್ಷಿಣ, ಉತ್ತರ ಮತ್ತು ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಪರಿಸರ ಪ್ರೇಮಿಗಳು ಮತ್ತು ಸಂರಕ್ಷಣಾ ತಜ್ಞರಿಂದ ಶ್ಲಾಘನೆ ಪಡೆದಿದೆ.

3. ಪ್ರಾಜೆಕ್ಟ್ ಸ್ನೋ ಲಿಯೊಪಾರ್ಡ್ – ಹಿಮಾಲಯದ ಅಪರೂಪದ ಗೂಢ ಪ್ರಾಣಿ

ಹಿಮ ಚಿರತೆ ಅಪಾಯದ ಅಂಚಿನಲ್ಲಿರುವ ಪ್ರಾಣಿ. ಇದರ ಸಂರಕ್ಷಣೆಗಾಗಿ 2009 ರಲ್ಲಿ ಪ್ರಾಜೆಕ್ಟ್ ಸ್ನೋ – ಲಿಯೋಫರ್ಡ್ ಅನ್ನು ಪ್ರಾರಂಭಿಸಲಾಯಿತು. ಇದು “ಆಂತರಾಷ್ಟ್ರೀಯ ನೈಸರ್ಗಿಕ ಸಂಪತ್ತು ಸಂರಕ್ಷಣಾ ಸಂಘಟನೆ (IUCN) ಯಿಂದ ಮಾನ್ಯತೆ ಪಡೆದಿದ್ದು, ಹಿಮಾಲಯದ ಪರ್ವತಮಟ್ಟದಲ್ಲಿ ಚಿರತೆಗಳ ಆವಾಸಸ್ಥಳವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಉತ್ತರಾಖಂಡ, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಈ ಯೋಜನೆಯ ಪ್ರಮುಖ ಕೇಂದ್ರಗಳಾಗಿವೆ.

4. ಗಿರ್ ಸಿಂಹ ಯೋಜನೆ – ಏಷ್ಯಾಟಿಕ್ ಸಿಂಹಗಳ ಸಂರಕ್ಷಣೆ

ಕೇವಲ ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಮಾತ್ರ ಕಂಡುಬರುವ ಏಷ್ಯಾಟಿಕ್ ಸಿಂಹಗಳ ಸಂರಕ್ಷಣೆ, ಭಾರತದ ಮಹತ್ತರ ಸಾಧನೆಯಲ್ಲೊಂದು. ನೂರು ವರ್ಷಗಳ ಹಿಂದೆ, ಈ ಸಿಂಹಗಳು ಅಪಾಯದ ಅಂಚಿನಲ್ಲಿದ್ದವು. ಆದರೆ ಸಮರ್ಥ ಪೂರಕ ಯೋಜನೆಗಳು ಮತ್ತು ಸ್ಥಳೀಯ ಜನಾಂಗದ ಸಹಕಾರದಿಂದ, ಇಂದು ಅವುಗಳ ಸಂಖ್ಯೆ 600ಕ್ಕೂ ಹೆಚ್ಚಾಗಿದೆ. ಜಾಗತಿಕ ವನ್ಯಜೀವಿ ತಜ್ಞರು ಮತ್ತು ವಿಶ್ವ ಪರಿಸರ ಸಂಘಟನೆಗಳು ಭಾರತದ ಈ ಯಶಸ್ಸನ್ನು ಹೊಗಳಿವೆ.

ಭಾರತದ ಜಾಗತಿಕ ಮಟ್ಟದ ಗೌರವ ಮತ್ತು ಮೆಚ್ಚುಗೆಗಳು

  • CITES (Convention on International Trade in Endangered Species): ಭಾರತವು ಅಪಾಯದಲ್ಲಿರುವ ಪ್ರಾಣಿಗಳು ಮತ್ತು ಸಸ್ಯಗಳ ಅಕ್ರಮ ವ್ಯಾಪಾರವನ್ನು ತಡೆಯಲು ಅಗತ್ಯ ಕಠಿಣ ಕ್ರಮಗಳನ್ನು ಕೈಗೊಂಡಿದೆ. CITES ಈ ಪ್ರಯತ್ನವನ್ನು ಗುರುತಿಸಿ, ಭಾರತವನ್ನು “ವಿಶ್ವದ ಪ್ರಮುಖ ಸಂರಕ್ಷಣಾ ನಾಯಕ” ಎಂದು ಕರೆದಿದೆ.
  • UNEP (United Nations Environment Programme): ಭಾರತದ ನೈಸರ್ಗಿಕ ಸಂಪತ್ತು ಸಂರಕ್ಷಣಾ ನೀತಿಗಳು, ಪರಿಸರ-ಸ್ನೇಹಿ ಯೋಜನೆಗಳು, ಮತ್ತು ಜೈವಿಕ ವೈವಿಧ್ಯತೆಯನ್ನು ಕಾಪಾಡಲು ದೇಶದ ಬದ್ಧತೆಯನ್ನು UNEP ಮೆಚ್ಚಿಕೊಂಡಿದೆ.
  • WWF (World Wildlife Fund): ಹುಲಿ ಮತ್ತು ಆನೆ ಸಂರಕ್ಷಣೆಯಲ್ಲಿ ಭಾರತವು ಪ್ರಮುಖ ಪಾತ್ರವಹಿಸಿರುವುದನ್ನು WWF (ವಿಶ್ವ ವನ್ಯಜೀವಿ ನಿಧಿ) ಶ್ಲಾಘಿಸಿದೆ ಮತ್ತು ಅದರ ಅನೇಕ ಯೋಜನೆಗಳಿಗೆ ಸಹಾಯ ನೀಡಿದೆ.

ಪ್ರಧಾನಮಂತ್ರಿ ಮೋದಿ ಅವರ ಗಿರ್ ಸಫಾರಿ ಮತ್ತು ಸಂರಕ್ಷಣಾ ಸಂದೇಶ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ವಿಶ್ವ ವನ್ಯಜೀವಿ ದಿನದಂದು (ಮಾರ್ಚ್ 3) ಗಿರ್ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಭಾರತದ ಯಶಸ್ವೀ ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳ ಬಗ್ಗೆ ಉಲ್ಲೇಖಿಸಿ, ಸಮುದಾಯ ಪಾಲ್ಗೊಳ್ಳುವಿಕೆ ಮತ್ತು ಪರಿಸರ ಜಾಗೃತಿಯ ಅಗತ್ಯತೆಯನ್ನು ಒತ್ತಿಹೇಳಿದರು.

“ನಮಗೆ ಬಿಟ್ಟಿರುವ ಪ್ರಕೃತಿ ಪರಂಪರೆಯನ್ನು ರಕ್ಷಿಸುವ ಜವಾಬ್ದಾರಿ ನಮ್ಮದು. ಹಸಿರುಪಯಣದ ಮೂಲಕ, ಸಮುದಾಯದ ಸಹಕಾರದಿಂದ, ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ನಾವು ನಮ್ಮ ವನ್ಯಜೀವಿಗಳನ್ನು ಉಳಿಸಬೇಕು.”

ನರೇಂದ್ರ ಮೋದಿ, ಪ್ರಧಾನ ಮಂತ್ರಿಗಳು

ಭಾರತ – ಜಾಗತಿಕ ಮಟ್ಟದಲ್ಲಿ ಮಾದರಿಯಾಗುತ್ತಿರುವ ಸಂರಕ್ಷಣಾ ರಾಷ್ಟ್ರ

ಭಾರತದ ಸಂರಕ್ಷಣಾ ನೀತಿಗಳು, ಸ್ಥಳೀಯ ಜನಾಂಗದ ಪಾಲ್ಗೊಳ್ಳುವಿಕೆ, ವೈಜ್ಞಾನಿಕ ಸಂಶೋಧನೆ, ಪರಿಸರ ಸ್ನೇಹಿ ಪ್ರವಾಸೋದ್ಯಮ ಮತ್ತು ತಂತ್ರಜ್ಞಾನ ಬಳಕೆಯಿಂದ ಇನ್ನೂ ಹೆಚ್ಚಿನ ಯಶಸ್ಸು ಸಾಧಿಸುತ್ತಿವೆ. ಭವಿಷ್ಯದ ಪೀಳಿಗೆಗಳಿಗೆ ವನ್ಯಜೀವಿಗಳನ್ನು ಕಾಪಾಡುವ ಪ್ರಯತ್ನಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮಾದರಿಯಾಗಿ ಎದ್ದು ನಿಂತಿದೆ.

ರಾಷ್ಟ್ರೀಯ