ಒಂದೂವರೆ ಲಕ್ಷ ಟ್ರಾಫಿಕ್ ಫೈನ್ ಕಟ್ಟಿದ ಸ್ಕೂಟರ್ ಸವಾರ

ಒಂದೂವರೆ ಲಕ್ಷ ಟ್ರಾಫಿಕ್ ಫೈನ್ ಕಟ್ಟಿದ ಸ್ಕೂಟರ್ ಸವಾರ

ಬೆಂಗಳೂರು: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಸುಮಾರು 311 ಪ್ರಕರಣ ದಾಖಲಾಗಿದ್ದರೂ ಆರಾಮಾಗಿ ತಿರುಗಾಡುತ್ತಿದ್ದ ಸ್ಕೂಟರ್ ಸವಾರನನ್ನು ಹಿಡಿಯುವಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಯಶಸ್ವಿಯಾಗಿದ್ದು, ಆತನಿಂದ ಬರೋಬ್ಬರಿ 1,61,500/- ದಂಡದ ಮೊತ್ತವನ್ನು ವಸೂಲಿ ಮಾಡಿದ್ದಾರೆ.

ಸ್ಕೂಟರ್ ಸವಾರ ಹೆಲ್ಮೆಟ್ ಹಾಕದೆ ಸ್ಕೂಟರ್ ಸವಾರಿ ಸೇರಿದಂತೆ ಸುಮಾರು 311 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈವನ ಬಗ್ಗೆ ಪೋಟೋಗಳು ವೈರಲ್ ಆಗಿತ್ತು, ಆದರೆ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಕೆಲದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಟ್ರಾಫಿಕ್ ಫೈನ್‌ ಫೋಟೋವೊಂದು ಭಾರೀ ವೈರಲ್‌ ಆಗುತ್ತಿತ್ತು. ಆದ್ರೆ ಪೊಲೀಸರು ಇದರ ವಿರುದ್ಧ ಯಾಕೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂಬ ಆಕ್ರೋಶವೂ ವ್ಯಕ್ತವಾಗಿತ್ತು.

ಆದ್ರೆ ಇದೀಗ ಕಳೆದ 3 ವರ್ಷಗಳಿಂದ ಸಂಚಾರ ನಿಯಮವನ್ನು ಉಲ್ಲಂಘಿಸಿ ರಾಜಾರೋಷವಾಗಿ ಓಡಾಡುತ್ತಿದ್ದ ವ್ಯಕ್ತಿಗೆ ಇದೀಗ ಪೊಲೀಸರು ಬ್ರೇಕ್‌ ಹಾಕಿದ್ದಾರೆ.ಸ್ಕೂಟರ್ ಸವಾರ ನ್ನು ಸ್ಕೂಟರ್ ಸಮೇತೆ ಪತ್ತೆ ಹಚ್ಚಿದ ಪೊಲೀಸರು ಅವನಿಂದ 311 ಪ್ರಕರಣ ಒಟ್ಟು 1,61,500/- ದಂಡದ ಮೊತ್ತವನ್ನು ಕಟ್ಟಿಸಿಕೊಂಡಿದ್ದಾರೆ. ಆದರೆ . ಸ್ಕೂಟರ್‌ಗಿಂತಲೂ ಹೆಚ್ಚಿನ ಹಣವನ್ನು ದಂಡವಾಗಿ ಕಟ್ಟಿರುವುದು ಸದ್ಯ ಭಾರೀ ವೈರಲ್ ಆಗುತ್ತಿದೆ.

ಅಪರಾಧ ರಾಜ್ಯ