ಬಸ್‌ಗಳ ನಡುವೆ ಅಪಘಾತ- ಚಾಲಕ ಸಹಿತ ಹಲವರಿಗೆ ಗಂಭೀರ ಗಾಯ .

ಬಸ್‌ಗಳ ನಡುವೆ ಅಪಘಾತ- ಚಾಲಕ ಸಹಿತ ಹಲವರಿಗೆ ಗಂಭೀರ ಗಾಯ .


ಬೆಳ್ತಂಗಡಿ: ನಿಡ್ಲೆ ಗ್ರಾಮದ ಬೂಡುಜಾಲು ಸಮೀಪ
ಮಕ್ಕಳ ಪ್ರವಾಸದ ಬಸ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಟೂರಿಸ್ಟ್ ಬಸ್ ಚಾಲಕ ಅಭಿಷೇಕ್ ಹಾಗೂ ಬಸ್ ಪ್ರಯಾಣಿಕ ದುರ್ಗೇಶ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಸಿಂಧನೂರಿನ ಕಾಲೇಜು ವಿದ್ಯಾರ್ಥಿಗಳ ಪ್ರವಾಸದ
ಟೂರಿಸ್ಟ್ ಬಸ್ ಧರ್ಮಸ್ಥಳ ಕಡೆಗೆ ಪ್ರಯಾಣಿಸುತ್ತಿದ್ದಾಗ
ಕೊಕ್ಕಡೆ ಕಡೆ ಹೋಗುವ ಸಂದರ್ಭದಲ್ಲಿ ಬಸ್ ಢಿಕ್ಕಿ
ಹೊಡೆದಿದೆ.
ಇನ್ನು ಚಾಲಕರ ಸಹಿತ ಬಸ್‌ನಲ್ಲಿದ್ದ ಮಕ್ಕಳು ಹಾಗೂ
ಪ್ರಯಾಣಿಕರು ಗಾಯಗೊಂಡಿದ್ದು ಗಾಯಾಳುಗಳನ್ನು
ಸ್ಥಳೀಯ ಶೌರ್ಯ ತಂಡದವರ ನೇತೃತ್ವದಲ್ಲಿ ಉಜಿರೆ
ಹಾಗೂ ಪುತ್ತೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ
ಪ್ರವಾಸದ ಬಸ್‌ನಲ್ಲಿ ಒಟ್ಟು 40 ವಿದ್ಯಾರ್ಥಿಗಳು ಹಾಗೂ ನಾಲ್ವರು ಉಪನ್ಯಾಸಕರು ಮತ್ತು ಒಬ್ಬ ಅಡುಗೆ
ಸಹಾಯಕರು ಕೂಡ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ

ರಾಜ್ಯ