ಪಕ್ಷ ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ : ರಾಜಕೀಯ ನಿವೃತಿ ಸಚಿವ ಅಂಗಾರ ಹೇಳಿಕೆ: ಸಚಿವ ಅಂಗಾರರ ವಿರುದ್ಧ ಸಮಾಜಿಕ ಜಾಲತಾಣದಲ್ಲಿ ಟೀಕೆಗಳ ಸುರಿಮಳೆ..

ಪಕ್ಷ ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ : ರಾಜಕೀಯ ನಿವೃತಿ ಸಚಿವ ಅಂಗಾರ ಹೇಳಿಕೆ: ಸಚಿವ ಅಂಗಾರರ ವಿರುದ್ಧ ಸಮಾಜಿಕ ಜಾಲತಾಣದಲ್ಲಿ ಟೀಕೆಗಳ ಸುರಿಮಳೆ..

ಕಳೆದ ಆರು ಅವದಿಯಲ್ಲಿ ಬಿಜೆಪಿಯಿಂದ ಗೆದ್ದು ಶಾಸಕನಾಗಿ , ಮೀನುಗಾರಿಕಾ ಸಚಿವನಾಗಿ ಕಾರ್ಯ ನಿರ್ವಹಿಸಿ ,ಎಂದೂ ಮಂತ್ರಿ ಪದವಿಗೆ ಲಾಭಿ ಮಾಡದೆ ಪಕ್ಷದ ನಿಷ್ಠಾವಂತರಾಗಿ, ಸಂಘಟನೆ ಹಾಕಿದ ಗೆರೆದಾಟದ ಅಂಗಾರ ,ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಸಿಕ್ಕದೆ ಇದ್ದಾಗ ತೀವ್ರ ನಿರಾಸೆಯಾಗಿ ಮಾಧ್ಯಮ ಎದುರು ತನ್ನ ಬೇಸರವನ್ನು ಹೊರಹಾಕಿದ್ದರು; ಇವರ ಈ ಮಾತುಗಳು ತೀವ್ರ ಟೀಕೆಗೆ ಒಳಗಾಗಿದೆ.
ಸುಳ್ಯದಲ್ಲಿ ಈ ಬಾರಿಯು ಸ್ವತಹ ತನಗೇ ಬಿ ಜೆ ಪಿ ಯಿಂದ ಸೀಟು ದೊರೆಯುತ್ತದೆ ಎಂದು ಭಾರೀ ನಿರೀಕ್ಷೆಯಲ್ಲಿದ್ದ ಅಂಗಾರರಿಗೆ ಎ. 11 ರಾತ್ರಿ ಕರಾಳ ರಾತ್ರಿಯಾಯಿತು.ಸುಳ್ಯಕ್ಕೆ ಬಿಜೆಪಿಯಿಂದ ಅಂಗಾರರ ಬದಲು ಭಾಗೀರಥಿ ಮುರಳ್ಯ ಹೆಸರು ಘೋಷಣೆಯಾಗುತ್ತಿದ್ದಂತೆ ತೀವ್ರ ಅಸಮಾದಾನಿತರಾದರು,ದುಖಃ ದಿಂದ ಗದ್ಗದಿತರಾದರು: ತನ್ನ ಜೀವನದ ರಾಜಕೀಯ ಪಯಣದಲ್ಲಿ ಆರಂಬಿಕ ಸೋಲನ್ನು ಹೊರತು ಪಡಿಸಿ ಮತ್ತೆ ಗೆಲುವಿನ ಪಯಣದಲ್ಲೀಯೇ ಸಾಗಿದ್ದ ಅಂಗಾರರಿಗೆ ಇದು ತನಗೆ ಎದುರಾದ ದೊಡ್ಡ ಸೋಲೆಂದೆಣಿಸಿಕೊಂಡರು:
2013 ರ ಚುನಾವಣೆಯಲ್ಲಿ ಅಲ್ಪ ಅಂತರದಲ್ಲಿ ಜಯಭೇರಿಯನ್ನು ಹೊರತು ಪಡಿಸಿ ಉಳಿದೆಲ್ಲಾ ಅವಧಿಗಳಲ್ಲಿ ಭಾರೀ ಅಂತರದಲ್ಲಿ ಜಯಗಳಿಸಿ ಎದುರಾಳಿಗಳಿಗೆ ಸಿಂಹಸ್ವಪ್ನರಾಗಿದ್ದರು; ಅಂಗಾರ ಸುಳ್ಯದ ಬಂಗಾರ ಎಂದು ಕಾರ್ಯಕರ್ತರು ಅಂಗಾರರ ಪ್ರತಿಸ್ವರೂಪವನ್ನೇ ತಮ್ಮೆದೆಗಳಲ್ಲಿ ಸಿಂಗಾರಗೊಳಿಸಿದ್ದರು,ಅಂಗಾರ ಗೆದ್ದಾಗ ತನ್ನದೇ ಗೆಲುವೆಂಬಂತೆ ಹೆಗಲ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡಿದ್ದರು, ಜಯಗೋಷ ಹಾಕಿದ್ದರು , ಅಭಿವೃದ್ದಿಯಲ್ಲಿ ಕಡಿಮೆಯಿದ್ದರೂ, ಅಂಗಾರರ ಸರಳತೆ, ಸಜ್ಜನಿಕೆಯನ್ನು ನೆನೆದು ಭೀಗಿದ್ದರು, ಅಂಗಾರರಿಗೆ ಕಾವಲಾಗಿದ್ದರು. ಅಂಗಾರರೋ ಅಭ್ಯರ್ಥಿ ಘೋಷಣೆ ಯಾಗುವವರೆಗೂ ಹೈಕಮಾಂಡ್ ನಿರ್ಧಾರಕ್ಕೆ ಬದ್ದ , ಹೈಕಮಾಂಡ್ ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರೂ ಚುನಾವಣೆ ಎದುರಿಸುತ್ತೇವೆ ಎಂದಿದ್ದ ಅಂಗಾರು ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತೆ ಯೂಟರ್ನ್ ತೆಗೆದು ಕೊಂಡರು, ಮಾದ್ಯಮದಲ್ಲಿ ತನಗಾದ ಬೇಸರವನ್ನು ತೋಡಿಕೊಂಡರು: ತನ್ನ ಮನದ ಇಂಗಿತವನ್ನು ಹಸಿ ಹಸಿಯಾಗಿ ಹೊರಹಾಕತೊಡಗಿದರು: ಪಕ್ಷ ತನ್ನ ಸರ್ವಸ್ವ ಎಂದು ಹೇಳಿದ್ದ ಅದೇ ಅಂಗಾರ; ಅದೇ ಪಕ್ಷದ ನಿರ್ಧಾರದಿಂದ ಸರ್ವಸ್ವವೂ ಕಳೆದುಕೊಂಡಂತೆ ನುಡಿಯತೊಡಗಿದರು : ರಾಜಕೀಯ ನಿವೃತಿಯ ಬಗ್ಗೆ ಆಡತೊಡಗಿದರು, ಪಕ್ಷದ ಪ್ರಚಾರಕ್ಕೂ ಬರುವುದಿಲ್ಲವೆಂದರು ಇವರ ಈ ಮಾತು ಇದೀಗ ಸಮಾಜಿಕ ಜಾಲತಾಣಗಳ ನಿತ್ಯ ಆಹಾರ ವಾಯಿತು, ಅಚ್ಚುಮೆಚ್ಚಿನ ಅಂಗಾರರ ವಿರುದ್ದ ಕಾರ್ಯಕರ್ತರು ತೀವ್ರ ತರದ ಟೀಕೆಯನ್ನು ಮಾಡುತ್ತಿರುವುದು ಕಂಡುಬರುತ್ತಿದೆ.ಎಲ್ಲೋ ಇದ್ದವರನ್ನು ಕರೆಸಿ ಆರು ಬಾರಿ ಶಾಸಕ ಮಾಡಿದರು ಕೃತಜ್ಞತೆ ಇಲ್ಲ ಎಂದು ಆಡಿಕೊಂಡಿದ್ದಾರೆ.

ಕೆಲವೊಂದು ತುಣುಕುಗಳನ್ನು ಪ್ರಕಟಿಸಲಾಗಿದೆ.

ರಾಜ್ಯ