
ಸುಳ್ಯ: ಬ್ಲಾಕ್ ಕಾಂಗ್ರೆಸ್ ಎಚ್ಚರಿಕೆಯ ನಡುವೆಯೇ ನಂದಕುಮಾರ್ ಅಭಿಮಾನಿ ಬಳಗ ಸುಳ್ಯದಲ್ಲಿ ಇಂದು ಪ್ರತ್ಯೇಕ ಸಭೆ ನಡೆಸಿದೆ, ಈ ಮೂಲಕ ಕಾಂಗ್ರೇಸ್ ನಲ್ಲಿ ನಾಯಕರ ಮತ್ತು ಕಾರ್ಯಕರ್ತರ ಒಡಕು ಮುನ್ನಲೆಗೆ ಬಂದಿದೆ,ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಹಿನ್ನಲೆಯಲ್ಲಿ ಹೆಚ್.ಎಂ.ನಂದಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವುದರಿಂದ ನಂದಕುಮಾರ್ ಅಭಿಮಾನಿಗಳ ಬಳಗ ಮಾ.26ರಂದು ಸುಳ್ಯ ಹಾಗು ಕಡಬದಲ್ಲಿ ಪ್ರತ್ಯೇಕ ಸಭೆ ಕರೆದು ಮಾತುಕತೆ ನಡೆಸಿದೆ ಸುಮಾರು ನೂರೈವತಕ್ಕ್ಕೂ ಅಧಿಕ ಮಂದಿ ಸಭೆಯಲ್ಲಿ ಭಾಗವಹಿಸಿದ್ದು ಸರ್ವೆಯಲ್ಲಿ ಗೆಲ್ಲುವ ಅಭ್ಯರ್ಥಿಯಾಗಿ ನಂದಕುಮಾರ್ ಹೆಸರು ಕೇಳಿ ಬಂದಿತ್ತು ಆದರೆ ಇದೀಗ ಅವರನ್ನು ಕೈ ಬಿಡಲಾಗಿದೆ ಇದು ಕಾರ್ಯಕರ್ತರಿಗೆ ಅಸಮದಾನ ಹೊರಹಾಕಿದ್ದಾರೆ. ನಂದಕುಮಾರ್ ಅವರಿಗೆ ಬಿ.ಪಾರಂ ಸಿಗುವವರೆಗೆ ಹೈಕಮಾಂಡ್ ಗೆ ಸುಳ್ಯದ ವಾಸ್ತವ ಸಂದೇಶ ರವಾನೆ ಮಾಡುವುದು , ನಂದಕುಮಾರ್ ರವರಿಗೆ ಮತ್ತೂ ಅಭ್ಯರ್ಥಿತನ ಸಿಗದಿದ್ದರೆ ಮತದಾನ ಚಟುವಟಿಕೆಯಿಂದ ಸಂಪೂರ್ಣ ಹಿಂದೆ ಸರಿಯುವ ತೀರ್ಮಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ ಪಕ್ಷದ ಪ್ರಮುಖರಾದ ಸಚಿನ್ ರಾಜ್ ಶೆಟ್ಟಿ, ಗೋಕುಲ್ ದಾಸ್, ಸತ್ಯಕುಮಾರ್ ಆಡಿಂಜ, ಮುತ್ತಪ್ಪ ಪೂಜಾರಿ, ಭವಾನಿ ಶಂಕರ ಕಲ್ಮಡ್ಕ ಸೇರಿದಂತೆ ನೂರಕ್ಕೂ ಅಧಿಕ ಪ್ರಮುಖರು ಭಾಗವಹಿಸಿದ್ದರು . ಒಟ್ಟಿನಲ್ಲಿಈ ಎಲ್ಲಾ ಬೆಳವಣಿಗೆಯನ್ನು ಕಾಂಗ್ರೇಸ್ ಪಕ್ಷ ಹೇಗೆ ಸರಿದೂಗಿಸಲಿದೆ ಕಾದು ನೂಡಬೇಕಾಗಿದೆ.



