
ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಕೃಷ್ಣಪ್ಪರವರಿಗೆ ಎ.18 ರಂದು , ಸುಳ್ಯ ಕಾಂಗ್ರೇಸ್ ಚುನಾವಣಾ ಕಚೇರಿಯಿಂದ ಸುಳ್ಯ ಮತ್ತು ಕಡಬ ಬ್ಲಾಕ್ ಎಲ್ಲಾ ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಸಾಗಿ ತಾ.ಪಂ ಕಚೇರಿಯಲ್ಲಿ ಚುನಾವಣಾಧಿಕಾರಿ ಅರುಣ್ ಕುಮಾರ್ ಸಂಗಾವಿಯವರಿಗೆ ನಾಮಪತ್ರ ಸಲ್ಲಿಸಿದರು,



ಇದೇ ಸಂದರ್ಭ ಪುರಭವನದ ಬಳಿ ಸಭಾಕಾರ್ಯಕ್ರಮ ನಡೆಯಿತು ಕೆಪಿಸಿಸಿ ವಕ್ತಾರೆ ಭವ್ಯನರಸಿಂಹ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು, ಕಾಂಗ್ರೇಸ್ ದ. ಕ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಿ ಸಿ ಜಯರಾಮ,ಎನ್ ಜಯಪ್ರಕಾಶ್ ರೈ, ಟಿ ಎಂ ಶಹೀದ್ ಇವರ ಜೊತೆಗಿದ್ದರು.ಸುಳ್ಯ ತಹಶೀಲ್ದಾರ್ ಸಹಾಯಕ ಚುನಾವಣಾಧಿಕಾರಿ ಮಂಜುನಾಥ್ , ಮತ್ತು ರಮೇಶ್ ಬಾಬು ಸಹಾಯಕ ಚುನಾವಣಾಧಿಕಾರಿ ನಿಯಮಗಳನ್ನು ತಿಳಿಸಿದರು.


