ಸುಳ್ಯ ವಿಧಾನ ಸಭಾ ಚುನಾವಣೆ ಭಾಗೀರಥಿ ಮುರುಳ್ಯ ನಾಮಪತ್ರ ಸಲ್ಲಿಕೆ.ಅದ್ದೂರಿಯ ಮೆರವಣಿಗೆಯೋಂದಿಗೆ ಅಭ್ಯರ್ಥಿಗೆ ಆತ್ಮ ಸ್ಥೈರ್ಯ ತುಂಬಿದ ಕಾರ್ಯಕರ್ತರು.

ಸುಳ್ಯ ವಿಧಾನ ಸಭಾ ಚುನಾವಣೆ ಭಾಗೀರಥಿ ಮುರುಳ್ಯ ನಾಮಪತ್ರ ಸಲ್ಲಿಕೆ.ಅದ್ದೂರಿಯ ಮೆರವಣಿಗೆಯೋಂದಿಗೆ ಅಭ್ಯರ್ಥಿಗೆ ಆತ್ಮ ಸ್ಥೈರ್ಯ ತುಂಬಿದ ಕಾರ್ಯಕರ್ತರು.

ತೆಂಗಿನ ಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದ ಮಾಜೀ ಮುಖ್ಯ ಮಂತ್ರಿ ಡಿ ವಿ ಸದಾನಂದ ಗೌಡ.

ಸುಳ್ಯ ವಿದಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ನೂರಾರು ಕಾರ್ಯಕರ್ತರೊಂದಿಗೆ ಬಂದು ಇಂದು ನಾಮಪತ್ರ ಸಲ್ಲಿಸಿದರು, ಸುಳ್ಯದ ಶ್ರೀ ರಾಮ ಪೇಟೆಯಿಂದ ಆರಂಭಗೊಂಡ ಮೆರವಣಿಗೆಗೆ ಮಾಜೀ ಮುಖ್ಯಮಂತ್ರಿ ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ತೆಂಗಿನಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು. ಸುಳ್ಯ ತಾಲೋಕು ಕಚೇರಿಯಲ್ಲಿ ಸಚಿವ ಅಂಗಾರ, ಮಂಡಲ ಅದ್ಯಕ್ಷ ಹರೀಶ್ ಕಂಜಿಪಿಲಿ, ಎ ವಿ ತೀರ್ಥರಾಮ , ಶೀಪತಿ ಭಟ್ ಮಜಿಗುಂಡಿ ಜೊತೆ ಆಗಮಿಸಿದ ಭಾಗೀರಥಿ ಮುರುಳ್ಯ, ಚುನಾವಣಾಧಿಕಾರಿ ಅರುಣ್ ಕುಮಾರ್ ರಿಗೆ ನಾಮ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಹಶೀಲ್ದಾರ್ ಮಂಜುನಾಥ್, ಕಡಬ ತಹಶೀಲ್ದಾರ್, ರಮೇಶ್ ಬಾಬು ಮೊದಲಾದವರಿದ್ದರು.

ರಾಜ್ಯ