
ಸುಬ್ರಹ್ಮಣ್ಯ, ಮಾ.8: ಯಾವುದೋ ಆಮಿಷಕ್ಕೆ ಒಳಗಾಗಿ ಮಹಿಳೆಯರು, ಹೆಣ್ಣು ಮಕ್ಕಳು ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಗುತ್ತಿರುವುದು ದುರಂತ. ಆದ್ದರಿಂದ ಮಹಿಳೆಯರು, ಹೆಣ್ಣು ಮಕ್ಕಳು ಯಾವುದೇ ಆಮಿಷಕ್ಕೆ ಒಳಗಾಗದೆ ತಮ್ಮ ಬದುಕು ರೂಪಿಸುವಲ್ಲಿ ಮುಂದಾಗಬೇಕು ಎಂದು ಸುಬ್ರಹ್ಮಣ್ಯದ ಕೆಎಸ್ಎಸ್ ಕಾಲೇಜಿನ ಉಪನ್ಯಾಸಕಿ ಆರತಿ ಹೇಳಿದರು.

ಅವರು ಕುಕ್ಕೆ ಸುಬ್ರಹ್ಮಣ್ಯದ ರಾಜೀವ್ ಗಾಂಧಿ ಸಭಾಭವನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ಸಹಯೋಗದೊಂದಿಗೆ ನಡೆದ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಹಿಳೆಯರು ಆರಂಭಿಸಿದ ಹೋರಾಟದ ಫಲದಿಂದ ಮಹಿಳಾ ಚಳುವಳಿ ಆರಂಭಗೊಂಡಿದೆ ಎಂದರು. ಸಮಾನತೆಯನ್ನು ಒಪ್ಪಿಕೊಳ್ಳೋಣ ಎಂಬುದನ್ನು ಎಲ್ಲರೂ ಸಹಕರಿಸಬೇಕು ಎಂದರು.
ಈ ಹಿಂದೆ ಅವಿಭಕ್ತ ಕುಟುಂಬಗಳಿದ್ದು, ಇವಾಗ ವಿಭಕ್ತ ಕುಟುಂಬಗಳಾಗಿದೆ. ಮೊದಲು ಮಹಿಳಾ ಪ್ರಧಾನ ಕುಟುಂಬಗಳಿತ್ತು. ಬಳಿಕ ಅದು ಬದಲಾಗಿ ಪುರುಷ ಪ್ರಧಾನ ಕುಟುಂಬಗಳಾಗಿ ಬದಲಾಗಿದೆ. ಮೊದಲು ಹೆಂಗಸರು ಮನೆ ಕೆಲಸ, ಗಂಡಸರು ಹೊರಗಿನ ಕೆಲಸದಲ್ಲಿ ತೊಡಗಿದ್ದರು. ಆದರೆ ಇಂದು ಮಹಿಳೆಯರೂ ಕೂಡ ಎಲ್ಲಾ ಕ್ಷೇತ್ರದಲ್ಲೂ ತೊಡಗಿಕೊಂಡು ಪುರುಷರಷ್ಟೇ ಸಮಾನವಾಗಿ ಬೆಳೆದಿದ್ದಾರೆ ಎಂದು
ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ.ರಂಗಯ್ಯ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತ ಗುಂಡಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಲಯನ್ಸ್ ಕ್ಲಬ್ ಕೋಶಾಧಿಕಾರಿ ರಾಮಚಂದ್ರ ಪಳಂಗಾಯ ಸ್ವಾಗತಿಸಿದರು. ವಿಮಲ ರಂಗಯ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಮ್ಮಾನ:



ಹೈನುಗಾರಿಕೆ ಕ್ಷೇತ್ರದ ಲಲಿತ ನರಸಿಂಹ, ಯಕ್ಷಗಾನ ಕ್ಷೇತ್ರದ ಭವ್ಯ ಕುಲ್ಕುಂದ, ಸರಕಾರಿ ಸೇವೆ ಕ್ಷೇತ್ರದ ಸುನಿತ, ಗುಡಿ ಕೈಗಾರಿಕೆ ಕ್ಷೇತ್ರದ ನಿರ್ಮಲ ರಾಮಕೃಷ್ಣ ಅವರನ್ನು ಕಾರ್ಯಕ್ರಮದಲ್ಲಿ ಅತಿಥಿಗಳು ಸಮ್ಮಾನಿಸಿ ಗೌರವಿಸಿದರು.
ವರದಿ: ಶಿವ ಭಟ್ ಸುಬ್ರಹ್ಮಣ್ಯ.