
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಆದಿಚುಂಚನಗಿರಿ ಜಾತ್ರಾ ಮಹೋತ್ಸವದ
ಪ್ರಯುಕ್ತ ಮಾ.೭ ರಂದು ಬಿಜಿಎಸ್ ಸಭಾಮಂಟಪದಲ್ಲಿ ಏರ್ಪಡಿಸಿದ್ದ ಸರ್ವಧರ್ಮ ಸಮ್ಮೇಳನ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.



ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಎಲ್ಲಾ ಶಾಖಾಮಠಗಳ ಪೂಜ್ಯ ಸ್ವಾಮೀಜಿಗಳವರು, ಹಿಂದೂ ಧರ್ಮ ಪೂಜ್ಯ ಶ್ರೀ ಶ್ರೀ ಗುಣನಾಥ ಸ್ವಾಮೀಜಿ, ಇಸ್ಲಾಂ ಧರ್ಮ ಹಾಫಿಝ್ ಮುಹಮ್ಮದ್ ಸುಷ್ಮಾನ್ ಸಖಾಫಿ ಆಲ್ ಓಕಮಿ, ಕ್ರೈಸ್ತ ಧರ್ಮ ಘಾದ ಐವಾನ್ ಡಿಸೋಜಾ , ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತ ವಿದ್ಯಾಪೀಠದ ಮುಖ್ಯಸ್ಥರು,ಜೈನ ಧರ್ಮ ಪ್ರೊ. ಡಾ. ಜಯಕುಮಾರ್ ಉಪಾಧ್ಯ ನಿರ್ದೇಶಕರು, ರಾಷ್ಟ್ರೀಯ ಪ್ರಾಕೃತ ಮತ್ತು ಸಂಶೋಧನಾ ಅಧ್ಯಯನ ಸಂಸ್ಥೆ, ಮಾಯುಬಲಿ ಪ್ರಾಕೃತ ವಿದ್ಯಾಪೀಠ, ಬೌದ್ಧ ಧರ್ಮ ಡಾ. ಕಲ್ಯಾಣ ಸಿರಿ ಭಂತೇಜಿ ಹಾಗೂ ಶಾಸಕರುಗಳಾದ ಶ್ರೀ ಪುಟ್ಟರಾಜ , ಶ್ರೀ ಸುರೇಶ್ ಗೌಡ , ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದ ದಮಸ್‌ದರ್ ಎಜ್ಯು ಆಂಡ್ ಚಾರಿಟಿ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಮಾತನಾಡಿ ,ಪ್ರಶಾಂತ ವಾತಾವರಣದಲ್ಲಿ ನಿರ್ಮಲವಾದ ಕ್ಯಾಂಪಸ್, ಅರಿವಿನ ಅಮೃತವನ್ನೂ, ಹಸಿದವರಿಗೆ ಅನ್ನವನ್ನೂ, ಸಾಂತ್ವನದ ಸಿಹಿ ಸಿಂಚನವನ್ನೂ ನೀಡುವ ಐತಿಹಾಸಿಕ ಮಠ, ಅನುಕರಣೀಯ ವ್ಯಕ್ತಿತ್ವದ ಆಕರ್ಷಕ ಸ್ವಭಾವ ಮಹಿಮೆಯುಳ್ಳ ಮನುಷ್ಯ ಸ್ನೇಹಿ ಮಠಾಧ್ಯಕ್ಷರು. ಒಟ್ಟಿನಲ್ಲಿ ಮನಸ್ಸಿಗೆ ಮುದ ನೀಡಿತು ನಿನ್ನೆಯ ದಿನ.
ಲಕ್ಷಾಂತರ ಜನಜಂಗುಳಿಯ ಮಧ್ಯೆ ತಾವುಗಳು ನೀಡಿದ ಹೃದಯಸ್ಪರ್ಶಿ ಆತಿಥ್ಯ, ದೇಶದ ನೈಜ್ಯ ಸೌಂದರ್ಯವನ್ನು ಒಂದೇ ವೇದಿಕೆಯಲ್ಲಿ ತೋರಿಸಿದ ಅಚ್ಚುಕಟ್ಟಾದ ಕಾರ್ಯಕ್ರಮ. ಎಲ್ಲವೂ ಅನುಕರಣೀಯ. ಮುಂದೆಯೂ ಅಲ್ಲಿಂದ ಭಾವೈಕ್ಯತೆಯ ಬೆಳಕು ಕರುನಾಡಿನಾದ್ಯಂತ ಹರಡುತ್ತಿರಲಿ. ಮನಸ್ಸಿನಾಂತರಾಳದ ಪ್ರಾರ್ಥನೆಯೊಂದಿಗೆ.. ಆಹ್ವಾನಿಸಿ ಅವಕಾಶ ಕಲ್ಪಿಸಿದ್ದಕ್ಕೆ ಕೃತಜ್ಞತೆಗಳು. ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
