
ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ರದ್ದು
ಮಾಡಿರುವುದು ಖಂಡನೀಯ ಈ ರೀತಿಯ ನಡವಳಿಕೆ ಕೇಂದ್ರ ಸರಕಾರ ರಾಹುಲ್ ಗಾಂಧಿಯ ಯಶಸ್ಸಿಗೆ ಮನ್ನಣಗೆ ಬೆಧರಿದೆ ಅಲ್ಲದೆ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ವಿರೋಧ ಪಕ್ಷಗಳ ಮೇಲೆ ತನಿಖಾ ಸಂಸ್ಥೆ ಮೂಲಕ ದಾಳಿ ಸಂಯೋಜನೆ ಮಾಡುತ್ತಾ ಹಿಟ್ಲರ್ ಆಡಳಿತ ನೆನಪಿಸುವಂತಿದೆ ಎಂಬುದನ್ನು ತೋರಿಸುತ್ತದೆ.ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದ್ದ ಹಾಗೆ ಇದೆ ಎಂದು ಹೇಳಿದ ಅವರು ಇದರಿಂದ ಎಲ್ಲಾ ವಿರೋಧ ಪಕ್ಷಗಳು ಒಂದಾಗುವಂತೆ ಮಾಡಿದ್ದಾರೆ ಎಂದು ಟಿ.ಎಂ ಶಹೀದ್ ಹೇಳಿದ್ದಾರೆ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಸ್ಟಿ ನಡೆಸಿ ಮಾತನಾಡಿ. ಯಾವುದಕ್ಕೂ ಹೆದರದೆ ರಾಹುಲ್ ಗಾಂಧಿಯವರು ಹೋರಾಟ ಮಾಡುವ ಕಾರಣ ಅವರ ಸದಸ್ಯತ್ವವನ್ನು ರದ್ದು ಪಡಿಸಿದ್ದಾರೆ ಎಂದರು. ಆಧಾರ್ ಕಾರ್ಡ್
ಮತ್ತು ಪಾನ್ ಕಾರ್ಡ್ ಜೋಡಣೆ ಮಾಡಲು ಒಂದು ಸಾವಿರ ಹಣ ಪಡೆಯುತ್ತಿರುವುದು ಕೇಂದ್ರ ಸರಕಾರ ಬಡವರನ್ನೂ, ಜನ ಸಾಮಾನ್ಯರನ್ನೂ ಹಗಲು ದರೋಡೆ ಮಾಡುತ್ತಿರುವುಕ್ಕೆ ಉದಾಹರಣೆ ಎಂದು ಅರೊಪಿಸಿದರು. ಮುಸ್ಲಿಂ ಸಮುದಾಯಕ್ಕೆ ಇದ್ದಂತಹಾ ರಾಜಕೀಯ, ಉದ್ಯೋಗ ಮೀಸಲಾತಿಯನ್ನು ರದ್ದು ಪಡಿಸುವ ಮೂಲಕ ರಾಜ್ಯ ಸರಕಾರ ಮುಸ್ಲಿಂ ಸಮುದಾಯಕ್ಕೆ ರಂಝಾನ್ ಗಿಫ್ಟ್ ನೀಡಿದೆ. ರಾಜಕೀಯವಾಗಿ, ಶಿಕ್ಷಣ, ಉದ್ಯೋಗದಲ್ಲಿ ಮುಸ್ಲಿಂ
ಸಮುದಾಯವನ್ನು ಮೇಲಕ್ಕೆ ತರಲು ನೀಡುತ್ತಿದ್ದ
ಮೀಸಲಾತಿಯನ್ನು ರದ್ದುಪಡಿಸಿರುವುದು ಖಂಡನೀಯ ಮಂದೆ ನಮ್ಮ ಸರಕಾರ ಬರುತ್ತದೆ ಆಗ ಈ ಲೋಪಗಳು ಪರಿಹಾರವಾಗಲಿದೆ ಎಂದರು.



ಭಾರತ್ ಜೋಡೋ ಯಾತ್ರೆ ಯಶಸ್ಸು ಭಾರತೀಯ ಧಾರ್ಮಿಕತೆಯ ಪುನರುತ್ಥಾನ :ಮುಸ್ತಫ
ರಾಹುಲ್ ಗಾಂಧಿಯವರು ನಡೆಸಿದ ಐತಿಹಾಸಿಕ ಭಾರತ್ ಜೋಡೋ ಯಾತ್ರೆಯ ಯಶಸ್ಸನ್ನು ಸಹಿಸದೆ ಕೇಂದ್ರ ಸರಕಾರ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ರದ್ದು ಮಾಡಿಸಿದೆ . ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಪಡಿಸಿರುವುದು ಖಂಡನೀಯ ಎಂದು ಕೆಪಿಸಿಸಿ ಅಲ್ಪ ಸಂಖ್ಯಾತ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫ ಹೇಳಿದ್ದಾರೆ.
ಸುಳ್ಯ ಕಾಂಗ್ರೇಸ್ ಬಿನ್ನಮತ ತಾತ್ಕಾಲಿಕ: ಟಿ ಎಮ್ ಶಹೀದ್.
ಸುಳ್ಯ ಕಾಂಗ್ರೇಸ್ ನಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆ ತಾತ್ಕಾಲಿಕವಾಗಿದ್ದು, ಎಲ್ಲಾ ಸಮಸ್ಯೆಗಳನ್ನು ರಾಜ್ಯ ನಾಯಕರು ಪರಿಹರಿಸಲಿದ್ದಾರೆ, ನಂದಕುಮಾರ್, ಹಾಗೂ ಜಿ ಕೃಷ್ಣಪ್ಪ ಇಬ್ಬರು ಉತ್ತಮ ವಾಗಿ ಪಕ್ಷ ಸಂಘಟಿಸಿದ್ದಾರೆ ಮಾಡಿದ ಕೆಲಸ ಅಳಿದು ತೂಗಿ ಒಬ್ಬರಿಗೆ ಟಿಕೆಟ್ ನೀಡಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಲ್ಪ ಸಂಖ್ಯಾತ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಬೂಸಾಲಿ, ಇಂಟೆಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದಿಕ್ ಕೊಕ್ಕೊ, ಬ್ಲಾಕ್ ಅಲ್ಪ ಸಂಖ್ಯಾತ ಕಾಂಗ್ರೆಸ್ ಉಪಾಧ್ಯಕ್ಷ ತಾಜುದ್ದೀನ್ ಅರಂತೋಡು ಉಪಸ್ಥಿತರಿದ್ದರು.
