ಪುತ್ತೂರು: ಬಾವಿಗೆ ಇಳಿದ ಮಾನಸಿಕ ಅಸ್ವಸ್ಥೆ ಮಹಿಳೆ,ಅಗ್ನಿಶಾಮಕ ದಳದಿಂದ ರಕ್ಷಣೆ.

ಪುತ್ತೂರು: ಬಾವಿಗೆ ಇಳಿದ ಮಾನಸಿಕ ಅಸ್ವಸ್ಥೆ ಮಹಿಳೆ,
ಅಗ್ನಿಶಾಮಕ ದಳದಿಂದ ರಕ್ಷಣೆ.


ಪುತ್ತೂರು: ಮಾನಸಿಕ ಅಸ್ವಸ್ಥೆಯೋರ್ವರು ಬಾವಿಗೆ ಇಳಿದು ಮೇಲೆ ಬರಲಾರದೆ ಬಳಿಕ
ಅಗ್ನಿ ಶಾಮಕದಳವರು ಆಗಮಿಸಿ ಅಸ್ವಸ್ಥೆಯನ್ನು ಮೇಲಕ್ಕೆ ಎತ್ತಿದ ಘಟನೆ ಪುತ್ತೂರಿನ ಕೆಯ್ಯೂರು ಸಮೀಪದಲ್ಲಿ ನಡೆದಿದೆ.
ಕೆಯ್ಯರು ಗ್ರಾಮದ ಮಾಡಾವು ಕಟ್ಟೆ ಬಳಿಯ ನಿವಾಸಿ
ಡೇನಿಯಲ್ ಡಿಸೋಜ ಎಂಬವರ ಪತ್ನಿ ವಿನುತ ಮೆಗಸ್ ಎಂಬವರು ಮಾನಸಿಕ ಅಸ್ವಸ್ಥತೆಯಿಂದ ತಮ್ಮ ಮನೆಯ ಎದುರುಗಡೆ ಇರುವ ಬಾವಿಗೆ ಇಳಿದಿದ್ದಾರೆ. ಮಹಿಳೆಯ ಮನೆಯವರು ವಿಷಯ ತಿಳಿದು ಪುತ್ತೂರು ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದರು. ಬಳಿಕ ಅಗ್ನಿ ಶಾಮಕ ದಳದವರು ಆಗಮಿಸಿ ಮಹಿಳೆಯನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.ಪುತ್ತೂರು ಅಗ್ನಿ ಶಾಮಕ ಠಾಣಾಧಿಕಾರಿ ವಿ.ಸುಂದರ,ಪ್ರಮುಖ ಅಗ್ನಿ ಶಾಮಕ ಕೆ.ಪ್ರವೀಣ್ ಕುಮಾರ್, ಚಾಲಕ ಮೈಲಾರಪ್ಪ ಅಗ್ನಿ ಶಾಮಕ ಅಬ್ದುಲ್ ಅಝೀಝ್,ಗೃಹರಕ್ಷಕರಾದ ಆಕಾಶ್,ಮಣಿಗಂಡನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ರಾಜ್ಯ