
ಇದೇ ಮೊತ್ತಮೊದಲ ಬಾರಿಗೆ ಕಾರಣಿಕ ಕ್ಷೇತ್ರವಾದ ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ಕ್ಷೇತ್ರದಲ್ಲಿ ಮಾ.3ರ ಶುಕ್ರವಾರದಿಂದ ಮಾ.5ರ ಆದಿತ್ಯವಾರದ ವರೆಗೆ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವವು ಮೂರು ದಿನಗಳ ಕಾಲ ಬಹಳ ಅದ್ಧೂರಿಯಾಗಿ ನಡೆಯಲಿದೆ ಎಂದು
ಎಂದು ದೈವಕಟ್ಟು ಮಹೋತ್ಸವದ ಸಮಿತಿ
ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ ತಿಳಿಸಿದ್ದಾರೆ.ಅವರು
ಇಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ
ನಡೆಸಿ ಮಾತನಾಡಿ ಪೆರಾಜೆ ರಾಜ್ಯ ಹೆದ್ಧಾರಿಯಿಂದ ಕವಲೊಡೆದು ಕುಂಬಳಚೇರಿ ಬರುವ ರಸ್ಥೆಯಲ್ಲಿ ನಾಲ್ಕು ಕಿಲೋಮೀಟರ್ ಕ್ರಮಿಸಿದರೆ ವಯನಾಟ್ ಕುಲವನ್ ದೈವಸ್ಥಾನ ದರ್ಶನವಾಗುತ್ತದೆ, ಈ ದೈವಸ್ಥಾನದ ವ್ಯಾಪ್ತಿಯ ಗ್ರಾಮಸ್ಥರೆಲ್ಲರೂ ಸೇರಿ ನಡೆಸಲು ಇಚ್ಚಿಸಿರುವ ಈ ಮಹೋತ್ಸವದಲ್ಲಿ
ಮಾ.3 ಶುಕ್ರವಾರದಂದು ಬೆಳಗ್ಗೆ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಿಂದ ಹಸಿರುವಾಣಿ ಮೆರವಣಿಗೆ ಹೊರಡುವುದು. ಬಳಿಕ ಉಗ್ರಾಣ ಮುಹೂರ್ತ (ಕಲವರ ನಿರಕ್ಕಲ್)) ನಡೆಯುವುದು. ಬಳಿಕ ಧಾರ್ಮಿಕ ಸಭೆ ನಡೆಯುವುದು. ಅಂದು ಸಂಜೆಯಿಂದ ದೈವಿಕ
ಕಾರ್ಯಕ್ರಮಗಳು ಆರಂಭಗೊಳ್ಳುವುದು. ರಾತ್ರಿ ಕೈವಿದ್,ದೈವಗಳ ಕೂಡುವಿಕೆ, ಶ್ರೀ ಪೊಟ್ಟನ್ ದೈವ ನಡೆಯುವುದು.ಮಾ.4 ರಂದು ಶನಿವಾರ ಬೆಳಗ್ಗೆಯಿಂದ ದೈವಗಳ ಮಹೋತ್ಸವ ನಡೆಯಲಿದ್ದು ಬೆಳಗ್ಗೆ 7 ಗಂಟೆಗೆ ಕೊರತಿಯಮ್ಮ ದೈವ, ಚಾಮುಂಡಿ ದೈವ, ಬಳಿಕ ವಿಷ್ಣುಮೂರ್ತಿ ದೈವ, ಮಧ್ಯಾಹ್ನ ಗುಳಿಗ ದೈವದ ಕೋಲ, ಸಂಜೆ ಕಾರ್ನೋನ್ ದೈವದ ವೆಳ್ಳಾಟ್ಟಂ, ಕೋರಚ್ಛನ್ ದೈವದ ವೆಳ್ಳಾಟ್ಟಂ, ರಾತ್ರಿ ಕಂಡನಾರ್ ಕೇಳನ್ ದೈವದ ವೆಳ್ಳಾಟ್ಟಂ, ವಿಷ್ಣುಮೂರ್ತಿ ದೈವದ ಆರಂಭ, ರಾತ್ರಿ 1 ಗಂಟೆಗೆ ವಯನಾಟ್ ಕುಲವನ್ ದೈವದ ವೆಳ್ಳಾಟ್ಟಂ ಆರಂಭವಾಗುವುದು. ಮಾ.5ರಂದು ಬೆಳಗ್ಗೆ ಕಾರ್ನೊನ್ ದೈವ,ಕೊರಚ್ಛನ್ ದೈವ, ಕಂಡನಾರ್ ಕೇಳನ್ ದೈವ, ಅಪರಾಹ್ನ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ, ಅಪರಾಹ್ನ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ, ರಾತ್ರಿ ಮರ ಪಿಳರ್ಕಲ್, ನಂತರ ಕೈವೀದ್ ನಡೆಯುವುದು ಎಂದು ಅವರು ವಿವರ ನೀಡಿದರು ನಿರಂತರ ಅನ್ನದಾನ ಮೂರು ದಿನಗಳ ಕಾಲ ನಡೆಯುವ ಈ ಅದ್ದೂರಿ ಕಾರ್ಯಕ್ರಮದಲ್ಲಿ 50,000 ಸಾವಿರಕ್ಕೂ ಅಧಿಕ ಭಕ್ತಾಧಿಗಳು ಭಾಗವಹಿಸಬಹುದೆಂಬ ನಿರೀಕ್ಷೆ ಇದ್ದು.



ಬಂದಂತಹ ಭಕ್ತಾದಿಗಳಿಗೆ. ಈ ಉತ್ಸವದ ಸಂದರ್ಭದಲ್ಲಿ ಬೆಳಗ್ಗೆ ಉಪಹಾರ, ಹಾಗೂ, ಮಧ್ಯಾಹ್ನ, ರಾತ್ರಿ ಅನ್ನದಾನ ಸೇವೆ ನಡೆಯುವುದು ಎಂದು ಹೇಳಿದರು.
ದೈವಕಟ್ಟು ಮಹೋತ್ಸವ ನಡೆಯುವ ಜಾಗದಲ್ಲಿ ಸುಮಾರು ೧೫ ಸಾವಿರ ಜನರು ನಿಲ್ಲಬಹುದಾದ ವ್ಯವಸ್ಥೆ ಇದೆ.ಸುತ್ತಮುತ್ತಲೂ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ.ವೈದ್ಯಕೀಯ, ಮಾಧ್ಯಮ ಹಾಗೂ ವಿಶೇಷ ಅತಿಥಿಗಳಿಗೆ ಪ್ರತ್ಯೇಕ ಕೇಂದ್ರ ತೆರೆಯಲಾಗುತ್ತದೆ. ಪಾರ್ಕಿಂಗ್ ಗೂ ಸುತ್ತಮುತ್ತ ವಿವಿಧ ಕಡೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಸಿದ್ಧತೆಗಳ ಕುರಿತು ವಿವರ ನೀಡಿದರು. ಶ್ರಮದಾನದ ಮೂಲಕ ಹಲವು ಕೆಲಸಗಳನ್ನು ಮಾಡಲಾಗುತ್ತಿದ್ದು ಎಂದು ಹೇಳಿದರು.

ಮಾ.3ರಂದು ಬೆಳಗ್ಗೆ 11 ಗಂಟೆಗೆ ಧಾರ್ಮಿಕ
ಸಭೆಯು ದೈವಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯರ ಅಧ್ಯಕ್ಷತೆಯಲ್ಲಿ ನಡೆಯುವುದು. ಶ್ರೀ ಕ್ಷೇತ್ರ ನೀಲೇಶ್ವರದ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರು ಧಾರ್ಮಿಕ ಉಪನ್ಯಾಸ ನೀಡುವರು.ವಿರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಕಾರ್ಯಕ್ರಮ
ಉದ್ಘಾಟಿಸುವರು.

ಕೊಡಗು – ಮೈಸೂರು ಸಂಸದ
ಪ್ರತಾಪಸಿಂಹ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ರವಿ ಕಾಳಪ್ಪ, ಮಡಿಕೇರಿ ತಾಲೂಕು ಅಕ್ರಮ – ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ ಕುಂದಲ್ಪಾಡಿ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ, ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನ ಸಮಿತಿ ಆಡಳಿತ ಮೊಕ್ತಸರ ಜಿತೇಂದ್ರ ನಿಡ್ಯಮಲೆ,ವಯನಾಟ್ ಕುಲವನ್ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ
ಪದ್ಮಯ್ಯ ಕುಂಬಳಚೇರಿ, ತಂಬುರಾಟಿ ಭಗವತೀ ಕ್ಷೇತ್ರ
ಕುತ್ತಿಕೋಲು ಆಡಳಿತ ಸಮಿತಿ ಅಧ್ಯಕ್ಷ ಕುಂಞಕಣ್ಣ ಬೇಡಗಂ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಿವಾಕರ ರೈ ಪೆರಾಜೆ ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ದೈವಕಟ್ಟು ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಸಂಘಟನಾ ಕಾರ್ಯದರ್ಶಿ ಉದಯ ಕುಂಬಳಚೇರಿ, ಪ್ರಚಾರ ಸಮಿತಿ ಅಧ್ಯಕ್ಷ ಅರುಣ ಮಜಿಕೋಡಿ, ಮಹೋತ್ಸವ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಮಜಿಕೋಡಿ ಮೊದಲಾದವರಿದ್ದರು.
