
ಸ್ಕಾರ್ಫಿಯೋ ಕಾರೊಂದು ಬೈಕ್‌ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಾಯಗೊಂಡಿರುವ ಘಟನೆ ಪೆರಾಜೆಯಲ್ಲಿ ವರದಿಯಾಗಿದೆ .ಪೆರಾಜೆ ಬಸ್ ನಿಲ್ದಾಣದ ಎದುರು ಬೈಕೊಂದಕ್ಕೆ ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುವ ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದಿದೆ. ಸುಳ್ಯದಿಂದ ಪೆರಾಜೆಗೆ ಬೈಕ್ ತಿರುಗಿಸುವ ಸಂದರ್ಭದಲ್ಲಿ ಬೈಕ್ ಗೆ ಹಿಂಬದಿಯಿಂದ ಸ್ಕಾರ್ಪಿಯೋ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಗೆ ಹಾನಿಯಾಗಿದ್ದು ಸವಾರನಿಗೆ ಸಣ್ಣ ಗಾಯಗಳಾಗಿದೆ.



ಮತ್ತೊಂದು ಪ್ರಕರಣದಲ್ಲಿ ಇಟಿಯೋಸ್ ಕಾರೊಂದು ನಿಯಂತ್ರಣ ತಪ್ಪಿ ತಡೆಗೋಡೆಗೆ ಗುದ್ದಿ ಅಪಘಾತಕ್ಕೆ ತುತ್ತಾಗಿದೆ. ಈ ಘಟನೆಯಲ್ಲಿ ಕಾರಿನ ಹಿಂಬಂದಿಯಲ್ಲಿ ಕುಳಿತಿದ್ದ ಮಹಿಳೆಯೊಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಅತಿಯಾದ ವೇಗದಿಂದ ಅಪಘಾತ ಸಂಭವಿಸಿರಬಹುದು ಎಂದು ಊಹಿಸಲಾಗಿದೆ. ಸದ್ಯ ಅವರು ಸುಳ್ಯದ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.