ಆಲೆಟ್ಟಿ ಗ್ರಾಮದ ಅರಂಬೂರು ಪಾಲಡ್ಕದಲ್ಲಿ ಬಸ್ ತಂಗುದಾಣ ಬೇಕೆಂಬ ಕೂಗು:ಸ್ಪಂದನೆ ನೀಡದ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ: ಚುನಾವಣಾ ಭಹಿಷ್ಕಾರದ ಬ್ಯಾನರ್ ಅಳವಡಿಕೆ:

ಆಲೆಟ್ಟಿ ಗ್ರಾಮದ ಅರಂಬೂರು ಪಾಲಡ್ಕದಲ್ಲಿ ಬಸ್ ತಂಗುದಾಣ ಬೇಕೆಂಬ ಕೂಗು:ಸ್ಪಂದನೆ ನೀಡದ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ: ಚುನಾವಣಾ ಭಹಿಷ್ಕಾರದ ಬ್ಯಾನರ್ ಅಳವಡಿಕೆ:


ಚುನಾವಣೆಗೆ ಸಮಯ ಹತ್ತಿರ ಬರುತಿದ್ದಂತೆ ಹಲವು ಕಡೆ ಗುದ್ದಲಿ ಪೂಜೆ, ಕೆಲವು ಕಡೆ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದೆ, ಈ ಮಧ್ಯೆ ಹಲವು ಬೇಡಿಕೆಗೆ ಆಗ್ರಹಿಸಿ ಚುನಾವಣಾ ಭಹಿಷ್ಕಾರದ ಕೂಗುಗಳು ಕೇಳಿ ಬಂದಿವೆ, ಅಂತೆಯೇ ಆಲೆಟ್ಟಿ ಗ್ರಾಮದ ಪಾಲಡ್ಕದಲ್ಲೂ ಈ ರೀತಿಯ ಭ್ಯಾನರ್ ಅಳವಡಿಸಿದ್ದಾರೆ,
ಆಲೆಟ್ಟಿ ಗ್ರಾಮದ ಅರಂಬೂರು ಸಮೀಪ ಪಾಲಡ್ಕ ಎಂಬಲ್ಲಿ ಹಲವಾರು ವರುಷ ಗಳಿಂದ ಬಸ್ ತಂಗುದಾಣ ನಿರ್ಮಾಣ ಮಾಡಿಕೊಡಬೇಕೆಂದು ಪಂಚಾಯತ್ ಗೆ ಸ್ಥಳಿಯರು ಮನವಿ ಸಲ್ಲಿಸಿದ್ದು,ಕಳೆದ 10ವರುಷ ಗಳಿಂದ ಬೇಡಿಕೆ ಇರಿಸಿದ್ದರೂ ಪಂಚಾಯತ್ ನಿಂದ ನಿರ್ಮಾಣ ಗೊಳ್ಳದೆ ಇದ್ದಾಗ ಪಾಲಡ್ಕ ಹಾಗೂ ಅಂಜಿಕಾರ್ ನಾಗರಿಕರು ಸೇರಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷರು,ಪಂಚಾಯತ್ PDO ಸೇರಿದಂತೆ ಸ್ಥಳೀಯ ಜನ್ರತಿನಿಧಿಗಳು ಬಂದು ಬಸ್ ತಂಗುದಾಣಕ್ಕೆ ಸ್ಥಳ ತೊರಿಸಿ ಕೊಟ್ಟಿದ್ದರು ಅದರಂತೆ ಸ್ಥಳೀಯರು ಸೇರಿ ತಾತ್ಕಾಲಿಕ ತಂಗುದಾಣ ನಿರ್ಮಾಣ ಮಾಡಿದ್ದರು.ಅದನ್ನು ಸ್ಥಳಿಯ ವ್ಯಕ್ತಿ ದ್ವಂಸ ಮಾಡಿದ್ದರು. ಇದೀಗ ಮತ್ತೆ ಪಾಲಡ್ಕ ಹಾಗೂ ಅಂಜೀಕಾರ್ ಭಾಗದ ಜನರು ಬಸ್ ತಂಗುದಾಣ ಬೇಡಿಕೆ ಇರಿಸಿ ಪಾಲಡ್ಕ,ಆಂಜಿಕಾರ್ ಜನತೆ ಬಸ್ಸ್ಥಾಂಡ್ ನಿರ್ಮಾಣವಾಗುವ ತನಕ ಮತದಾನ ಭಾಹಿಷ್ಕಾರ ಮಾಡಲು ನಿರ್ಧರಿಸಿರುವ ಬ್ಯಾನರ್ ಪಾಲಡ್ಕದಲ್ಲಿ ಅಳವಡಿಸಿದ್ದಾರೆ.

ರಾಜ್ಯ