ಸುಬ್ರಹ್ಮಣ್ಯ: ಬಸ್ – ಬೈಕ್
ನಡುವೆ ಡಿಕ್ಕಿ ಓರ್ವ ಯುವಕ ಮೃತ್ಯು: ಮತ್ತೋರ್ವ ಪ್ರಾಣಾಪಯದಿಂದ ಪಾರು.


ಸುಬ್ರಹ್ಮಣ್ಯ ಸಮೀಪ ಇಂಜಾಡಿಯಲ್ಲಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಯುವಕ ಸಾವನ್ನಪ್ಪಿ ಮತ್ತೋರ್ವ ಸಣ್ಣ ಪುಟ್ಟ ಗಾಯದೊಂದಿಗೆ ಪ್ರಾಣಾಪಯದಿಂದ ಪಾರಾಗಿರುವ ಘಟನೆ ಮಾ.೧೦ ರ ರಾತ್ರಿ ವರದಿಯಾಗಿದೆ.
ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಲಬಾರ್ ಬಸ್
ಸುಬ್ರಹ್ಮಣ್ಯ ಕ್ಕೆ ಬರುತಿದ್ದು ಹಾಗೂ ಸುಬ್ರಹ್ಮಣ್ಯ ಕಡೆಯಿಂದ ಇಂಜಾಡಿ ಕಡೆ ತೆರಳುತಿದ್ದ ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ ಘಟನೆಯಲ್ಲಿ ಓರ್ವ ಮೃತಪಟ್ಟು, ಮತ್ತೋರ್ವ ಗಾಯಗೊಂಡಿದ್ದಾರೆ ಸುಬ್ರಹ್ಮಣ್ಯ ಇಂಜಾಡಿ ಬಳಿ ಈ ದುರದಘಟನೆ ನಡೆದಿದೆ.ಮೃತ ವ್ಯಕ್ತಿಯನ್ನು ಸುಬ್ರಹ್ಮಣ್ಯದ ಕಲ್ಲಗುಡ್ಡೆ ನಿವಾಸಿ ರಮೇಶ್ ಕಲ್ಲಜಡ್ಕ ಎಂದು ತಿಳಿದು ಬಂದಿದೆ.
ಘಟನೆ ನಡೆದ ತಕ್ಷಣ ಗಂಭೀರ ಗಾಯಗೊಂಡ ರಮೇಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರಾದರೂ ಹಾದಿ ಮಧ್ಯೆ ಮೃತಪಟ್ಟಿರುವುದಾಗಿ
ತಿಳಿದುಬಂದಿದೆ. ಅವರಿಗೆ 27 ವರ್ಷ ವಯಸ್ಸಾಗಿತ್ತು. ಮತ್ತೊಬ್ಬ ಗಾಯಾಳು ಸಣ್ಣ ಪುಟ್ಟ ಗಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.ಸ್ಥಳಕ್ಕೆ ಸುಬ್ರಹ್ಮಣ್ಯ ಪೋಲಿಸರು ದೌಡಾಯಿಸಿದ್ದಾರೆ.

ರಾಜ್ಯ