ನಾಳೆಯಿಂದ ಸುಳ್ಯ ಶಾಂತಿನಗರ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಆರಂಭ

ನಾಳೆಯಿಂದ ಸುಳ್ಯ ಶಾಂತಿನಗರ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಆರಂಭ

ಸುಳ್ಯದ ಶಾಂತಿನಗರದಲ್ಲಿರುವ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಮಾ.೧೧ ಶನಿವಾರದಿಂದ ಮಾ ಮಾ.೧೨ ರ ಆದಿತ್ಯವಾರದವರೆಗೆ ಕಾಲಾವಧಿ ನೇಮೋತ್ಸವ ಭಾರೀ ವಿಜ್ರಂಬಣೆಯಿಂದ ನಡೆಯಲಿದೆ, ಪ್ರಾತಕಾಲ ೬ ಗಂಟೆಗೆ ಗಣಪತಿ ಹವನದೊಂದಿಗೆ ಪೂಜಾ ಕಾರ್ಯಕ್ರಮ ಪ್ರಾರಂಭಗೊಂಡು, ಬೆ.9 ಸಂಜೆ 4 ಗಂಟೆವರೆಗೆ ಭಜನೆ ಕಾರ್ಯಕ್ರಮ ನಡೆಯಲಿದೆ, ನಂತರ ಕುಣಿತ ಭಜನೆ, ಸಂಜೆ ೫ ಗಂಟೆಯಿಂದ ಪೈಂಗುತ್ತಿ ಸೇವೆ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ, ರಾತ್ರಿ ಗಂಟೆ 8 ರಿಂದ, ಶ್ರೀ ಮುತ್ತಪ್ಪ ದೈವದ ಬೆಳ್ಳಾಟಂ, ಸಾರ್ವಜನಿಕ ಅನ್ನ ಸಂತರ್ಪಣೆ, ರಾತ್ರಿ ಗಂಟೆ ೧೦ ರುಮಾಲುಕಟ್ಟುವುದು,ಮೊದಲಾದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ, ಮಾ.೧೨ ಆದಿತ್ಯವಾರ ಬೆಳಿಗ್ಗೆ ೬.ಗಂಟೆಯಿಂದ ಮುತ್ತಪ್ಪ ತಿರುವಪ್ಪ ದೈವಗಳ ನೇಮೋತ್ಸವದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ರಾಜ್ಯ