
ಮಂಗಳೂರು: ಓವರ್ ಟೇಕ್ ಮಾಡುವ ಭರದಲ್ಲಿ
ಅತೀವೇಗದಿಂದ ಬಂದಿರುವ ಕಾರೊಂದು ಸ್ಕೂಟರ್,
ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿ
ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲಿಯೇ
ಮೃತಪಟ್ಟಿರುವ ದಾರುಣ ಘಟನೆಯೊಂದು ಮುಡಿಪು
ಜಂಕ್ಷನ್ ನಲ್ಲಿ ನಡೆದಿದೆ.ಬೋಳಿಯಾರು ಗ್ರಾಮದ ಬಟ್ರಬೈಲು ಹರಿಶ್ಚಂದ್ರ ಹಾಗೂ ಅರುಣಾಕ್ಷಿ ದಂಪತಿಯ ಪುತ್ರ ಮುಡಿಪು ಸರಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಕಾರ್ತಿಕ್ ಮೃತಪಟ್ಟ ವಿದ್ಯಾರ್ಥಿ.



ಕಾರ್ತಿಕ್ ಇಂದು ಶಾಲೆ ಬಿಟ್ಟ ಬಳಿಕ ಮನೆ ಕಡೆಗೆ ಹೋಗಲೆಂದು ರಸ್ತೆ ಬದಿಯಲ್ಲಿ ನಿಂತಿದ್ದಾನೆ. ಈ ವೇಳೆ ಮುಡಿಪು ಕಡೆಗೆ
ಸಂಚರಿಸುತ್ತಿದ್ದ ಕಾರು ಅತಿ ವೇಗದಿಂದ ಆಗಮಿಸಿ
ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದು, ಬಳಿಕ ಸ್ಕೂಟರ್,
ಆಟೋರಿಕ್ಷಾಗೆ ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಂತಿದ್ದ
ಕಾರ್ತಿಕ್ ಮೇಲೆಯೇ ಹರಿದಿದೆ.ಪರಿಣಾಮ ಗಂಭೀರವಾಗಿ ಗಾಯಗೊಂಡ ಕಾರ್ತಿಕ್
ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕಾರು ಚಾಲಕನಿಗೆ
ನಾಳೆ ಹೊಸ ಕಾರು ಬರುವುದರಲ್ಲಿದ್ದು, ಇಂದು ಆತ
ಸ್ನೇಹಿತನ ಕಾರು ಚಲಾಯಿಸಿಕೊಂಡು ಬಂದಿದ್ದಾನೆ
ಎನ್ನಲಾಗಿದೆ. ಈ ಬಗ್ಗೆ ಮಂಗಳೂರು ಸಂಚಾರ ದಕ್ಷಿಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು
ತನಿಖೆ ನಡೆಸುತ್ತಿರುತ್ತಾರೆ.