
ಮಂಗಳೂರು: ಮಸೀದಿ ಲೈಟ್ ಆಫ್ ವಿಚಾರದಲ್ಲಿ ಗಲಾಟೆ ನಡೆದು ಮಸೀದಿ ಕಾರ್ಯದರ್ಶಿಗೆ ಯುವಕನೊಬ್ಬ ಚೂರಿ ಇರಿದಿರುವ ಘಟನೆ ಸುರತ್ಕಲ್ ಕಾನ ಜನತ ಕಾಲೋನಿ ಮಸೀದಿ ಬಳಿ ನಡೆದಿದೆ.ಸ್ಥಳೀಯ ನಿವಾಸಿ ತ್ವಾಹಿರ್ (24)) ಎಂಬಾತ ಮಸೀದಿ ಕಾರ್ಯದರ್ಶಿ ಮಹಮ್ಮದ್ ಶಾಫಿ (38) ಎಂಬವರಿಗೆ ಚೂರಿ ಇರಿದಿದ್ದು, ಗಾಯಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ರಾತ್ರಿ ಮಸೀದಿ ಲೈಟ್ ಆಫ್ ವಿಚಾರದಲ್ಲಿ ಗಲಾಟೆ ನಡೆದು ಇರಿದಿದ್ದು, ಆರೋಪಿಯು ಈ ಹಿಂದೆ ಚುನಾವಣೆ ವೇಳೆ ಮೊಯಿದ್ದೀನ್ ಬಾವ ಕಾಲರ್ ಹಿಡಿದಿದ್ದ ಎನ್ನಲಾಗಿದೆ.


ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.