ಮಂಗಳೂರು ಸ್ಫೋಟ ಪ್ರಕರಣ:ಆರೋಪಿ ಶಾರೀಕ್ ಆರೋಗ್ಯದಲ್ಲಿಶೇಕಡ 80 ಸುಧಾರಣೆ: ಚುರುಕುಗೊಂಡ ತನಿಖೆ.

ಮಂಗಳೂರು ಸ್ಫೋಟ ಪ್ರಕರಣ:
ಆರೋಪಿ ಶಾರೀಕ್ ಆರೋಗ್ಯದಲ್ಲಿ
ಶೇಕಡ 80 ಸುಧಾರಣೆ: ಚುರುಕುಗೊಂಡ ತನಿಖೆ.

ಮಂಗಳೂರು: ರಾಜ್ಯವನ್ನು ಬೆಚ್ಚಿ ಬೀಳಿಸಿದ ಮಂಗಳೂರು ಕುಕ್ಕರ್ ಸ್ಫೋಟದ ಶಂಕಿತ ಆರೋಪಿ ಶಾರೀಕ್ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆಯಾಗಿದೆ. ಆರೋಪಿ ಶೇಕಡ 80ರಷ್ಟು ಸುಧಾರಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಆರೋಪಿಯನ್ನು
ತನ್ನ ವಶಕ್ಕೆ ತೆಗೆದುಕೊಳ್ಳಲಿದೆ. ಶಾರೀಕ್ ವಿಚಾರಣೆ ನಡೆಸಿ ಇದಕ್ಕೆ ಪ್ರೇರಣೆ ನೀಡಿದವರ ವಿವರ, ಸಹಕಾರ ನೀಡಿದವರು,ಯಾವ ಸಂಘಟನೆಯೊಂದಿಗೆ ನಂಟಿದೆ ಈ ಎಲ್ಲಾ ಮಾಹಿತಿ ಕಲೆಹಾಕಲಿದೆ.ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಾರೀಕ್ ಗೆ ಎಂಟು ಮಂದಿ ಪರಿಣಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಯಾವುದೆ ಖಾಸಗಿ ವ್ಯಕ್ತಿಗಳು ಆರೋಪಿಯನ್ನು ಬೇಟಿಯಾಗುವುದನ್ನು ನಿರ್ಬಂಧಿಸಲಾಗಿದೆ.

ರಾಜ್ಯ