ಮಂಗಳೂರು : 50 ಕ್ವಿಂಟಾಲ್ ಪಡಿತರ ಅಕ್ಕಿ ಅಕ್ರಮ ಸಾಗಾಟ – ಮೂಲ್ಕಿ ಪೋಲಿಸರಿಂದ ಇಬ್ಬರು ಆರೋಪಿಗಳ ಬಂಧನ.

ಮಂಗಳೂರು : 50 ಕ್ವಿಂಟಾಲ್ ಪಡಿತರ ಅಕ್ಕಿ ಅಕ್ರಮ ಸಾಗಾಟ – ಮೂಲ್ಕಿ ಪೋಲಿಸರಿಂದ ಇಬ್ಬರು ಆರೋಪಿಗಳ ಬಂಧನ.

ಸುಮಾರು 50 ಕ್ವಿಂಟಲ್‌ಕ್ಕಿಂತಲೂ ಅಧಿಕ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅಕ್ಕಿ ಹಾಗೂ ಲಾರಿ ಸಮೇತ ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳನ್ನು ಬಂಟ್ವಾಳ ನಿವಾಸಿಗಳಾದ ಸಮೀರ್ ಮತ್ತು ಯಾಸಿರ್ ಎಂದು ಗುರುತಿಸಲಾಗಿದೆ.ಆರೋಪಿಗಳು ಮುಲ್ಕಿ ಸಮೀಪದ ಬಳ್ಕುಂಜೆ ಕಡೆಯಿಂದ ಮೈಸೂರು ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ನಡೆಸುತ್ತಿದ್ದು, ಮಂಗಳವಾರ ಮುಂಜಾನೆ ಮುಲ್ಕಿ ಬಸ್ಸು ನಿಲ್ದಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಲಾರಿಯನ್ನು ಸಂಶಯದಿಂದ ಗಸ್ತು ತಿರುಗುತ್ತಿದ್ದ ಮುಲ್ಕಿ ಪೊಲೀಸರು ನಿಲ್ಲಿಸಿದಾಗ ಚಾಲಕ ಗೊಬ್ಬರ ಎಂದು ಸುಳ್ಳು ಹೇಳಿದ್ದಾನೆ.ಈ ಸಂದರ್ಭ ಪೊಲೀಸರು ಪರಿಶೀಲನೆ ನಡೆಸಿದಾಗ ಅಕ್ರಮ ಪಡಿತರ ಅಕ್ಕಿ ಸಾಗಾಟ ಬೆಳಕಿಗೆ ಬಂದಿದ್ದು ಲಾರಿಯಲ್ಲಿದ್ದ ಇಬ್ಬರನ್ನು ಬಂಧಿಸಿದ್ದು ಪ್ರಮುಖ ಆರೊಪಿಯ

ಹುಡುಕಾಟದಲ್ಲಿದ್ದಾರೆ ಲಾರಿಯಲ್ಲಿ 50 ಕ್ವಿಂಟಾಲ್ ಗೂ ಅಧಿಕ ಪಡಿತರ ಅಕ್ಕಿ ಇದ್ದು ಮಂಗಳೂರು ಕಂದಾಯ ಇಲಾಖೆಯ ಪ್ರಭಾರ ಅಧಿಕಾರಿ ಮಾಣಿಕ್ಯ ಹಾಗೂ ಮುಲ್ಕಿ ಪೊಲೀಸರು ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.

ರಾಜ್ಯ