
ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ಕ್ಕೆ ಕ್ಷಣ ಗಣನೆ ಆರಂಭ ಗೊಂಡಿದ್ದು ಮಾ.1 ರಂದು ಶ್ರೀ ತಂಬುರಾಟಿ ಭಗವತಿ ಕ್ಷೇತ್ರ ಕುತ್ತಿಕೋಲು ಇದರ ಆಡಳಿತ ಮಂಡಳಿಯ ಅಧ್ಯಕ್ಷ ರಾದ ಕುಂಞಿಕಣ್ಣ ಬೇಡಗಂ, ಕಾರ್ಯದರ್ಶಿ ಶ್ರೀಧರನ್ ಪರ ಯ0ಬಳ್ಳ, ಕೋಶಾಧಿಕಾರಿ ಅನಿಲ್ ರವರು ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆ ಪರಿಶೀಲನೆ ನಡೆಸಿದರು ಇದುವರೆಗೂ ನಡೆದಿರುವ ಕಾಮಗಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು .



ಮಹೋತ್ಸವ ಸಮಿತಿಯ ಅಧ್ಯಕ್ಷ ರಾದ ಹೊನ್ನಪ್ಪ ಕೊಳಂಗಾಯ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷ ರಾದ ಪದ್ಮಯ್ಯ ಕುಂಬಳಚೇರಿ ಯವರು ಇದುವರೆಗೂ ನಡೆದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಮಹೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿ ಉದಯ ಕುಂಬಳಚೇರಿ, ಆಡಳಿತ ಮಂಡಳಿ ಯ ಕಾರ್ಯದರ್ಶಿ ವಿಶ್ವನಾಥ ಮಜಿ ಕೋಡಿ ಮಹೋತ್ಸವ ಸಮಿತಿಯ ಉಪಾಧ್ಯಕ್ಷರಾದ ರಾಧಾಕೃಷ್ಣ ಪರಿವಾರಕಾನ, ಕಾರ್ಯಧ್ಯಕ್ಷ ರಾದ ಶ್ರೀಜಿತ್, ಕಾರ್ಯದರ್ಶಿ ಪ್ರದೀಪ್, ಒಳಾ 0ಗಣ ಸಮಿತಿಯ ಉಪಸಂಚಾಲಕ ಅಭಿಷೇಕ್ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಗಳು ತಂಬುರಾಟಿ ಭಗವತಿ ಸೇವಾ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
