
ಮಳೆ ಹಾನಿ, ಆನೆ ಹಾವಳಿಯಿಂದ ಕಂಗೆಟ್ಟ ಹರಿಹರ ಕೊಲ್ಲಮೊಗ್ರ ಭಾಗದ ನಿವಾಸಿಗಳು ಮತ್ತೊಮ್ಮೆ ಆತಂಕಗೀಡಾಗಿದ್ದಾರೆ,ಕಾರಣ ಹರಿಹರಪಲ್ಲತ್ತಡ ಕೊಲ್ಲಮೊಗ್ರ ರಸ್ತೆಯ ಕಟ್ಟ ಕ್ರಾಸ್ ಬಳಿ
ರಸ್ತೆಯಲ್ಲಿ ಕಳೆದ ರಾತ್ರಿ ಚಿರತೆ ಕಂಡುಬಂದಿದ್ದು ಇದರಿಂದ ಈ ಭಾಗದ ರೈತರ ಸಾಕು ಪ್ರಾಣಿಗಳ ಜೀವಕ್ಕೆ ಸಂಚಕಾರ ಬಂದಿದೆ. ಸಾಕು ನಾಯಿ ,ಕರು, ಆಡುಗಳನ್ನು ಅಟ್ಟಾಡಿಸಿ ಹಿಡಿಯುತಿದ್ದ ಚಿರತೆಗಳು ಇದೀಗ ರಸ್ತೆಯಲ್ಲಿಯೇ ನಿರಾಂತಕವಾಗಿ ಓಡಾಡುತ್ತಿದ್ದು, ಕಂಡು ಬಂದಿದ್ದು ಈ ಬಾಗದ ರೈತರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ
.ಡಿ.16 ರಂದು ರಾತ್ರಿ ವೇಳೆ ಕಾರಿನಲ್ಲಿ ತೆರಳುತ್ತಿದ್ದಾಗ ಚಿರತೆ ಪ್ರತ್ಯಕ್ಷವಾಗಿದ್ದು,ಹಾರ್ನ್ ಮಾಡಿದ ನಂತರವೇ ರಸ್ತೆ ಬಿಟ್ಟು ಬದಿಗೆ ತೆರಳಿ ಚರಂಡಿಯಲ್ಲಿ ನಿಂತಿದೆ ಎಂದು ಪ್ರತ್ಯಕ್ಷದರ್ಶಿ ಪ್ರವೀಣ್ ಕೊಪ್ಪಡ್ಕ ತಿಳಿಸಿದ್ದಾರೆ. ರಾತ್ರಿ ನಡೆದುಕೊಂಡು ಹಾಗೂ ಬೈಕ್ ನಲ್ಲಿ ಸಂಚರಿಸುವವರು ಜಾಗ್ರತೆ ವಹಿಸಬೇಕಾಗಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳು ಗಮನ ಹರಿಸಬೇಕಾಗಿದೆ.

