
ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ ರೋಟರಿ ಪ್ರೌಡಶಾಲೆ ಮಿತ್ತಡ್ಕದಲ್ಲಿ ನಡೆಯಿತು. ಕಾರ್ಯಕ್ರಮವನ್ನು ನೆಲ್ಯಾಡಿ ಸೈಂಟ್ ಜಾರ್ಜ್ ಶಿಕ್ಷಣ ಸಂಸ್ಥೆಯ ಅಭ್ರಾಹಂ ವರ್ಗೀಸ್.ದೀಪಬೆಳಗಿಸಿ ಉದ್ಘಾಟಿಸಿದರು



ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಚಾರಿಟೇಬಲ್ ಟ್ರಷ್ಟ್ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದು ಮುಖ್ಯ ಅತಿಥಿಗಳಾಗಿ ನೆಲ್ಯಾಡಿ ಸೈಂಟ್ ಜಾರ್ಜ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ, ಅಭ್ರಾಹಂ ವರ್ಗೀಸ್ ಭಾಗವಹಿಸಿ ಮಾತನಾಡಿ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಣ ಸಂಸ್ಥೆಯ ಅತ್ಯಂತ ಪ್ರೇರಣಾತ್ಮಕ ಚಟುವಟಿಕೆ ,ಪ್ರತಿಭೆ ಭಂಗಾರದ ನಾಣ್ಯವಿದ್ದಂತೆ. ಮಕ್ಕಳು ಪ್ರೀತಿ ,ಸಂರಕ್ಷಣೆ,ಮತ್ತು ಪ್ರೇರಣೆಯಷ್ಟೇ ಬಯಸುವುದು, ಶಿಕ್ಷಕರು ಪೂರಕ ಪ್ರೇರಕರು ಎಂದರು, ವೇದಿಕೆಯಲ್ಲಿ ರೋಟರಿ ಕ್ಲಬ್ ಪದಾಧಿಕಾರಿಗಾಳಾದ ನಿವೃತ ಪ್ರಾಚಾರ್ಯ ಬೆಳ್ಯಪ್ಪ ಗೌಡ,ರೋಟರಿ ಟ್ರಸ್ಟ್ ಕೋಶಾಧಿಕಾರಿ ಗಿರಿಜಾ ಶಂಕರ್ ತುದಿಯಡ್ಕ , ಆನಂದ ಖಂಡಿಗ, ಡಾ.ಪುರುಷೋತ್ತಮ, ಮಹಾಲಕ್ಷ್ಮಿ ಕೊರಂಬಡ್ಕ,ದಯಾನಂದ ಆಳ್ವ,
ಶಿಕ್ಷಣ ಸಂಸ್ಥೆ ಪಿ ಯು ವಿಭಾಗದ ಪ್ರಾಂಶುಪಾಲರಾದ ಶೋಭಾ ಬೊಮ್ಮೆಟ್ಟಿ , ಪೌಢ ಶಾಲಾ ಮುಖ್ಯ ಶಿಕ್ಷಕಿ ವೀಣಾ ಶೇಡಿಕಜೆ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಹರಿಣೀ ಕೆ ಎಸ್. ಶಾಲಾ ವಿದ್ಯಾರ್ಥಿ ನಾಯಕರುಗಳಾದ ಪಿ ಯು ವಿಭಾಗದ ಕೌಶಿಕ್ ರೈ, ಪ್ರೌಢ ವಿಭಾಗದ

ಅರ್ಜುನ್,ಪ್ರಾಥಮಿಕ ವಿಭಾಗದ.ಚರಿಷ್ಮಾ ರೈ ಮೊದಲಾದವರಿದ್ದರು ಕಾರ್ಯಕ್ರಮದಲ್ಲಿ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಮೆರೆದ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಯಿತು, ಶಾಲೆಯ ಗೌರವ ಎತ್ತಿಹಿಡಿದ ಶಾಲಾ ಶಿಕ್ಷಕಿ ಉಷಾ ರವರನ್ನು ಶಿಕ್ಷಣಸಂಸ್ಥೆ ಪರವಾಗಿ ಗೌರವಿಸಲಾಯಿತು.


