ಬಿಜೆಪಿಯಲ್ಲಿ ಯಾರೇ ಅಭ್ಯರ್ಥಿಯಾದರೂ ಕಾಂಗ್ರೇಸ್ ಪಕ್ಷ ಎದುರಿಸಲು ಸಿದ್ಧವಾಗಿದೆ: ಜಿ ಕೃಷ್ಣಪ್ಪ.

ಬಿಜೆಪಿಯಲ್ಲಿ ಯಾರೇ ಅಭ್ಯರ್ಥಿಯಾದರೂ ಕಾಂಗ್ರೇಸ್ ಪಕ್ಷ ಎದುರಿಸಲು ಸಿದ್ಧವಾಗಿದೆ: ಜಿ ಕೃಷ್ಣಪ್ಪ.

ಸುಳ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಟಿಕೆಟ್ ಪಡೆದುಕೊಂಡಿರುವ ಅಭ್ಯರ್ಥಿ ಜಿ ಕೃಷ್ಣಪ್ಪ ಕ್ಷೇತ್ರದಾದ್ಯಂತ ಮನೆ ಮನೆ ಬೇಟಿ ನೀಡಿ ಬಿರುಸಿನಿಂದ ಮತಯಾಚನೆ ಮಾಡುತ್ತಿದ್ದು ಎದುರಾಳಿ ಪಕ್ಷದ ಅಭ್ಯರ್ಥಿ ಘೋಷಣೆಯಾದ ಬೆನ್ನಲೆ ನ್ಯೂಸ್ ರೂಮ್ ಫಸ್ಟ್ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಾಂಗ್ರೇಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಈ ದೇಶಕ್ಕೆ ನೀಡಿದ ಕೊಡುಗೆ ಅಪಾರ, ಸುಳ್ಯದಲ್ಲೂ ಜನ ಆಳ್ವಪಕ್ಷದ ವಿರುದ್ದ ಜನಭಿಪ್ರಾಯ ಹೊರಹಾಕುತ್ತಿದ್ದಾರೆ.ಸುಳ್ಯದಲ್ಲಿ ಕಾಂಗ್ರೇಸ್ ಗೆಲುವನ್ನು ಜನ ಬಯಸಿದ್ದಾರೆ, ಬದಲಾವಣೆ ಬಯಸಿರುವ ಜನ ಕಾಂಗ್ರೇಸ್ ಕೈ ಹಿಡಿಯಲಿದ್ದಾರೆ, ಬಿಜೆಪಿ ಪಕ್ಷದಿಂದ ಯಾರೇ ಅಭ್ಯರ್ಥಿಯಾಗಿ ಆಯ್ಕೆಯಾದರೂ ನಮ್ಮ ಪಕ್ಷ ಅವರನ್ನು ಎದುರಿಸಲು ಸರ್ವಸನ್ನಧ್ದವಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ