ಕಾಣಿಯೂರಿನ ಭಕ್ತನಿಗೆ ಒಲಿದ ಬೆಟ್ಟದಪುರ ಕೊರಗಜ್ಜ: ಕಾಣದಾದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತೆ ಪ್ರತ್ಯಕ್ಷ.

ಕಾಣಿಯೂರಿನ ಭಕ್ತನಿಗೆ ಒಲಿದ ಬೆಟ್ಟದಪುರ ಕೊರಗಜ್ಜ: ಕಾಣದಾದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತೆ ಪ್ರತ್ಯಕ್ಷ.

ಕಾಣೆಯಾಗಿದ್ದ ಚಿನ್ನದ ಪೆಟ್ಟಿಗೆಯೊಂದು ಪೆರಾಜೆ ಗ್ರಾಮದ ಬೆಟ್ಟದಪುರ ಕೊರಗಜ್ಜನಿಗೆ ಹರಕೆ ಕೇಳಿಕೊಂಡ ಮರುದಿನ ಕವಾಟಿನಲ್ಲಿ ಇಟ್ಟ ಜಾಗದಲ್ಲೇ ಮತ್ತೆ ಚಿನ್ನಾಭರಣ ಪ್ರತ್ಯಕ್ಷವಾದ ಸ್ವಾರಸ್ಯಕರ ಘಟನೆಯೊಂದು ಕಾಣೀಯೂರಿನಲ್ಲಿ ನಡೆದಿದೆ, ಕಾಣಿಯೂರಿನ ರಾಜೇಶ್ ಎಂಬವರ ಮನೆಯಲ್ಲಿದ್ದ ಕವಾಟಿನಲ್ಲಿ ಚಿನ್ನದ ಪೆಟ್ಟಿಗೆಯೊಂದನ್ನು ಭದ್ರವಾಗಿ ಲಾಕರ್ ನಲ್ಲಿಇಟ್ಟಿದ್ದರು ಅದರಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣವಿತ್ತು.ಫೆ 16 ರಂದು ಯಾವುದೋ ಕಾರ್ಯಕ್ರಮ ನಿಮಿತ್ತ ಚಿನ್ನವನ್ನು ಹುಡುಕಿದಾಗ ಪೆಟ್ಟಿಗೆ ಗೋಚರವಾಗಿರಲ್ಲಿಲ್ಲ, ಮನೆಯವರೆಲ್ಲಾ ಸೇರಿ ಎಲ್ಲಾ ವಸ್ತುಗಳನ್ನು ಹೊರತೆಗೆದು ಮತ್ತೆ ಹುಡುಕಿದಾಗಲೂ ಪತ್ತೆಯಾಗಿರಲಿಲ್ಲ , ಕೂಡಲೇ ರಾಜೇಶ್ ತಾನು ಭಕ್ತಿಯಿಂದ ಪೂಜಿಸುವ ಪೆರಾಜೆ, ಬೆಟ್ಟದಪುರ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಲೋಲಾಕ್ಷ ಬೆಟ್ಟದಪುರದವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಕೂಡಲೆ ಅವರು ಮನೆಯ ತುಳಸಿ ಕಟ್ಟೆಯಲ್ಲಿ ವೀಳ್ಯ ತೆಗೆದಿಟ್ಟು ನಾಳೆ ಇದೇ ಸಮಯಕ್ಕೆ ಅದೇ ಜಾಗದಲ್ಲಿ ನೋಡಿ ಚಿನ್ನದ ಪೆಟ್ಟಿಗೆ ಸಿಗುತ್ತದೆ ಎಂದು ಹೇಳಿದ್ದರು. ಅದರಂತೆ ರಾಜೇಶರು ಫೆ.17 ಬೆಳಿಗ್ಗೆ ವೀಳ್ಯವನ್ನು ತೆಗೆದಿರಿಸಿದ್ದರು ಸಂಜೆ ಧರ್ಮದರ್ಶಿ ಹೇಳಿದ ಸಮಯದಲ್ಲಿ ಕವಾಟಿನಲ್ಲಿ ನೋಡಿದಾಗ , ಚಿನ್ನದ ಪೆಟ್ಟಿಗೆ ಗೋಚರವಾಗಿದೆ, ಕರಾವಳಿಯಲ್ಲಿ ಕೊರಗಜ್ಜ ಒಂದಲ್ಲ ಒಂದು ರೀತಿಯಲ್ಲಿ ತನ್ನ ಭಕ್ತರಿಗೆ ಕಾರ್ಣಿಕ ತೊರ್ಪಡಿಸುತ್ತಿದ್ದು, ನಂಬುವ ಭಕ್ತರನ್ನು ಕೈ ಹಿಡಿದು ರಕ್ಷಣೆ ಮಾಡುತ್ತಿದೆ ಎಂದು ರಾಜೇಶರು‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

ರಾಜ್ಯ