ಜ.10 ರಂದು 110 ಕೆ ವಿ ಸಬ್ ಸ್ಟೇಶನ್ ಕಾಮಗಾರಿಗೆ ಶಂಕುಸ್ಥಾಪನೆ: ಸಚಿವ ಅಂಗಾರ.

ಜ.10 ರಂದು 110 ಕೆ ವಿ ಸಬ್ ಸ್ಟೇಶನ್ ಕಾಮಗಾರಿಗೆ ಶಂಕುಸ್ಥಾಪನೆ: ಸಚಿವ ಅಂಗಾರ.

ಸುಳ್ಯದ ಜನತೆಯ ಹಲವು ವರ್ಷಗಳ ಬೇಡಿಕೆಯಾಗಿರುವ 110 ಕೆ.ವಿ.ಸಬ್‌ಸ್ಟೇಶನ್ ಕಾಮಗಾರಿ ಆರಂಭಕ್ಕೆ ಕ ಜ.10ರಂದು ಶಂಕುಸ್ಥಾಪನೆ ನಡೆಯಲಿದೆ. ಎಂದು ಸಚಿವ ಅಂಗಾರ ಎಸ್ ಹೇಳಿದ್ದಾರೆ ಈ ಕುರಿತು ಸುಳ್ಯದ ನಿರಿಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಸ್.ಅಂಗಾರ ಸುಳ್ಯದಲ್ಲಿ ಎಲ್ಲರ ಬೇಡಿಕೆಯಾಗಿರುವ 110 ಕೆ.ವಿ. ಸಬ್‌ಸ್ಟೇಶನ್ ನಿರ್ಮಾಣಕ್ಕೆ ಜನವರಿ 10 ರಂದು ಶಂಕುಸ್ಥಾಪನೆ ನೆರವೇರಿಸಲಾಗುವುದು. 110 ಕೆ.ವಿ. ಸಬ್‌ಸ್ಟೇಶನ್‌ಗೆ ಅರಣ್ಯ ವಿಭಾಗದಿಂದಲೂ ನಿರಾಪೇಕ್ಷಣಾ ಪತ್ರ ಲಭಿಸಿದೆ ಆ ಮೂಲಕ ಅರಣ್ಯದ ತೊಡಕು ನಿವಾರಣೆಯಾಗಿದೆ. 2007 ರಲ್ಲಿ 110 ಕೆ.ವಿ. ಸಬ್ ಸ್ಟೇಶನ್ ಕಾಮಗಾರಿಗೆ 14 ಕೋಟಿ 92ಲಕ್ಷ ಅಂದಾಜು ಪಟ್ಟಿ ಮಾಡಲಾಗಿತ್ತು.ಆದರೆ ಈಗ ಅದರ ವ್ಯವಸ್ಥೆಗೆ ವ 46ಕೋಟಿ 20 ಲಕ್ಷ ಬೇಕಾಗಿದ್ದು . ಇದಕ್ಕೆ ಕೆಪಿಟಿಸಿಎಲ್ ಬೋರ್ಡ್ ಸಭೆಯಲ್ಲಿ ಮಂಜೂರಾತಿ ಸಿಗಬೇಕಾಗಿತ್ತು. ಇಂಧನ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಂಧ್ರಪ್ರದೇಶದವರಿಗೆ ಕಾಮಗಾರಿ

ಗುತ್ತಿಗೆಕೊಡಲಾಗಿದೆ. ಜನವರಿ 10 ರಂದು ಬೆಳಗ್ಗೆ ಇಂಧನ ಸಚಿವರಾದ ಸುನಿಲ್ ಕುಮಾರ್ ವರರು ಶಂಕುಸ್ಥಾಪನೆ ನಡೆಸಲಿದ್ದಾರೆ ಕಾಮಗಾರಿ 12 ತಿಂಗಳಲ್ಲಿ ಪೂರ್ಣಗೊಳಿಸುವ ಯೋಜನೆಯಿದ್ದು ಸಾರ್ವಜನಿಕರು ಸಹಕಾರ ನೀಡಿದರೆ ಶೀಘ್ರ ಕಾಮಗಾರಿ ಪೂರ್ಣವಾಗುವುದು , ಅಭಿವೃದ್ಧಿ ವಿಚಾರದಲ್ಲಿ ಸಾರ್ವಜನಿಕರು ಸಹಕಾರ ಮಾಡಬೇಕು ಎಂದು ಹೇಳಿದರು‌ , ಈ ಸಂದರ್ಭದಲ್ಲಿ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಗಂಗಾಧರ್ ,ಕೆಪಿಟಿಸಿಎಲ್ ಸುಪರಿಟೆಂಡೆಂಟ್ ಇಂಜಿನಿಯರ್ ರವಿಕಾಂತ್
ಕಾಮತ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ,ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ,ಪ್ರಮುಖರಾದ ಸುಭೋದ್ ಶೆಟ್ಟಿ ಮೇನಾಲ, ಸುನಿಲ್ ಕೇರ್ಪಳ ಮೊದಲಾದವರಿದ್ದರು.

ರಾಜ್ಯ