ಸುಳ್ಯದಲ್ಲಿ ಕೃಷಿ ಮೇಳದ ಅಂಗವಾಗಿ ಅದ್ಧೂರಿ ಮೆರವಣಿಗೆ.

ಸುಳ್ಯದಲ್ಲಿ ಕೃಷಿ ಮೇಳದ ಅಂಗವಾಗಿ ಅದ್ಧೂರಿ ಮೆರವಣಿಗೆ.


ಕಂಭಳದ ಕೋಣ ಮತ್ತು ಅಂಕದ ಕೋಳಿಗಳು ಮೆರವಣಿಗೆಯಲ್ಲಿ ಪ್ರದರ್ಶನ ಮಾಡಲಾಯಿತು.
ಸುಳ್ಯದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಪ್ರಯುಕ್ತ
ಸುಳ್ಯದ ಜ್ಯೋತಿ ಸರ್ಕಲ್ ಬಳಿಯಿಂದ ಮೆರವಣಿಗೆ ಆರಂಭಗೊಂಡಿತು, ಸವಣೂರು ವಿದ್ಯಾಸಂಸ್ಥೆ ಗಳ ಸಂಚಾಲಕ ಸೀತಾರಾಮ ರೈ ಹಸಿರು ನಿಶಾನೆ ಹಾರಿಸುವುದರ ಮೂಲಕ ಮೆರವಣಿಗೆಗೆ ಚಾಲನೆ
ನೀಡಿದರು. ಈ ಸಂದರ್ಭದಲ್ಲಿ ಮೆರವಣಿಗೆಸಮಿತಿ ಸಂಚಾಲಕ ದೊಡ್ಡಣ್ಣ ಬರೆಮೇಲು, ಎನ್ ಎ ರಾಮಚಂದ್ರ,ಪ್ರಣವ ಸೊಸೈಟಿ ಅಧ್ಯಕ್ಷ ಜಿ ಆರ್ ಪ್ರಸಾದ್ , ವೀರಪ್ಪ ಗೌಡ ಕಣ್ಕಲ್,ಸಂತೋಷ್ ಜಾಕೆ, ಸಂತೋಷ್ ಕುತ್ತಮೊಟ್ಟೆ, ಎಸ್ ಎನ್ ಮನ್ಮಥ,, ಡಾ ಡಿ.ವಿ ಲೀಲಾಧರ್, ಡಾ.ಲಕ್ಷ್ಮೀಶ, ಆನಂದ ಖಂಡಿಗ, ದಿನೇಶ್ ಕೊಲ್ಚಾರ್, ಗೊಕುಲ್ ದಾಸ್, ಭವಾನಿಶಂಕರ ಅಡ್ತಲೆ, ದೇವರಾಜ್ ಕುದ್ಪಾಜೆ, ಯಶ್ವಿತ್ ಕಾಳಮನೆ ಮೊದಲಾದವರ ಉಪಸ್ಥಿತಿಯಿದ್ದರು.


ಮೆರವಣಿಗೆಯಲ್ಲಿ ಕೇರಳ ಚೆಂಡೆ,
ಎನ್.ಸಿ.ಸಿ. ಬ್ಯಾಂಡ್ ಸೆಟ್, ನಾಸಿಕ್ ಬ್ಯಾಂಡ್, ಶಾಲಾ ವಿದ್ಯಾರ್ಥಿಗಳು ರೈತರು, ಅಡಿಕೆ ಬೆಳೆಗಾರರು ಭಾಗವಹಿಸದ್ದರು, ಮೆರವಣಿಗೆ ಕೃಷಿ ಮೇಳ ನಡೆಯುತ್ತಿರು ಸಭಾಂಗಣದ ವರೆಗೆ ಸಾಗಿ ಬಂದಿತು

ರಾಜ್ಯ