ಸುಳ್ಯ: ಬೀರಮಂಗಿಲದ ಬಾಡಿಗೆ ಮನೆಯೊಂದರಲ್ಲಿ ಗೊಣಿಚೀಲದಲ್ಲಿ ಕಟ್ಟಿ ಹಾಕಿರವ ಸ್ತಿತಿಯಲ್ಲಿ ಮಹಿಳೆಯ ಶವ ಪತ್ತೆ ಯಾಗಿದೆ ಸುಳ್ಯ ಬೀರಮಂಗಿಲದಲ್ಲಿ ಬಂಗಾಳಿ ಮೂಲದ ಇಮ್ರಾನ್ ಪತ್ನಿಯೊಂದಿಗೆ ಕಳೆದ 7 ತಿಂಗಳಿಂದ ವಾಸವಿದ್ದ, ಸುಳ್ಯದ ಪ್ರತಷ್ಟಿತ ಹೋಟೇಲ್ ನಲ್ಲಿ ಇಮ್ರಾನ್ ಅಡುಗೆ ಕೆಲಸ ಮಾಡುತ್ತಿದ್ದ,ಎಂದು ಹೇಳಲಾಗಿದೆ ಹೋಟೆಲಗೆ ಒಂದು ವಾರ ರಜೆ ಕೇಳಿ ಬಂದಿದ್ದು, ಬಂದವನೇ ಮನೆಯಲ್ಲಿ ಪತ್ನಿಯೊಂದಿಗೆ ಜೋರಾಗಿ ಮಾತಾಡುತ್ತಿದ್ದು ಸ್ವಲ್ಪ ಹೊತ್ತಿನಲ್ಲಿ ಅಕ್ಕ ಪಕ್ಕದ ಮನೆಯವರಿಗೆ ಕಿರುಚಿದ ಶಬ್ದ ಕೇಳಿ ಬಂದಿತ್ತು, ಅದಾಗಿ ಒಂದು ದಿವಸ ಕಳೆದು ಆತ ಮನೆಯನ್ನು ಕಾಲಿ ಮಾಡಿ ರಿಕ್ಷಾದಲ್ಲಿ ತೆರಳಿದ್ದ, ಈ ಸಂದರ್ಬ್ ಕೇಳಿದ್ದ ನೆರೆಮನೆಯವರಿಗೆ ಹೋಟೇಲ್ ಕೆಲಸ ಬಿಟ್ಟಿದ್ದು ಊರಿಗೆ ಹೋಗುವುದಾಗಿ ಹೇಳಿದ್ದ ಇಮ್ರಾನ್ ತೆರಳುವಾಗ ಒಬ್ಬನೇ ಹೋಗಿದ್ದ ಇದರಿಂದ ಸಂಶಯ ಗೊಂಡಿದ್ದ ನೆರೆಕರೆಯವರು ಏನೋ ಅನಾಹುತ ಆಗಿದೆ ಎಂದು ಯೋಚಿಸಿದ್ದರು ಆದರೆ ಮನೆಗೆ ಹೊರಗಿನಿಂದ ಬೀಗ ಹಾಕಲ್ಪಟ್ಟಿತ್ತು .ಹೋಟೇಲ್ ಮಾಲಿಕರು ಅಡುಗೆ ಕೆಲಸದಾಳು ಕೆಲಸಕ್ಕೆಬಾರದ ಹಿನ್ನಲೆಯಲ್ಲಿ ಹುಡುಕಿಕೊಂಡು ಇಮ್ರಾನ್ ಮನೆಗೆ ಬಂದಾಗ ಇಮ್ರಾನ್ ಮನೆ ಕಾಲಿ ಮಾಡಿದ್ದ ಈ ಸಂದರ್ಬದಲ್ಲಿ ನೆರೆಮನೆಯವರು ನಡೆದ ವಿಷಯವನ್ನು ಹೋಟೇಲ್ ಮಾಲಿಕರಿಗೆ ತಿಳಿಸಿದ್ದರು, ಇದರಿಂದ ಸಂಶಯಗೊಂಡ ಹೋಟೇಲ್ ಮಾಲಿಕರು ಪೋಲೀಸರಿಗೆ ತಿಳಿಸಿದ್ದು, ಪೋಲೀಸರು ಬಂದು ಬೀಗ ಒಡೆದು ಒಳ ಹೋಗಿ ನೋಡಿದಾಗ ಮಹಿಳೆಯ ಶವ ಗೋಣಿಚೀಲದಲ್ಲಿ ಕಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.ನಾಪತ್ತೆಯಾಗಿರುವ ಇಮ್ರಾನ್ ಪೋನ್ ಕರೆಗೆ ಸ್ಫಂದಿಸದೆ ಇದ್ದ ಹೆನ್ನಲೆಯಲ್ಲಿ ಇಮ್ರಾನ್ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಅಂದಾಜಿಸಲಾಗಿದೆ, ಸ್ಥಳಕ್ಕೆ ಡಿ ವೈ ಎಸ್ ಪಿ ವೀರಯ್ಯ ಹಿರೇಮಠ್ , ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ , ಸುಳ್ಯ ಎಸ್ ಐ ದಿಲೀಪ್ ಕುಮಾರ್ ಬೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.




