ರಾಜ್ಯ

ಮಾದಕ ವಸ್ತು ಸೇವಿಸಿ ನಶೆಯಲ್ಲಿದ್ದ ಇಬ್ಬರ ಬಂಧನ.

ಮಾದಕ ವಸ್ತು ಸೇವಿಸಿದ ಆರೋಪದಡಿ ವಿಟ್ಲದ ಕೊಳ್ನಾಡು ಗ್ರಾಮದ ಬೊಳ್ಪಾದೆಯಲ್ಲಿ ಇಬ್ಬರನ್ನು ಜ 7 ರಂದು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಸಾಲೆತ್ತೂರು ಮೆದು ನಿವಾಸಿ ಅಬೂಬಕ್ಕರ್ ಸಿದ್ದೀಕ್ (30), ಕೊಳ್ನಾಡು ಕಾನಭಜನ ನಿವಾಸಿ ಕಬೀರ್ (30) ಬಂಧಿತ ಆರೋಪಿಗಳು.ವಿಟ್ಲಪೇಟೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರಿಗೆ ದೊರೆತ ಖಚಿತ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಶನಿವಾರ ಬೆಳಗ್ಗೆ ಕೊಳ್ನಾಡು ಗ್ರಾಮದ ಬೊಳ್ಪಾದೆ ಆಟದ ಮೈದಾನದಲ್ಲಿ ಇಬ್ಬರು ಯುವಕರು ಮಾದಕ ದ್ರವ್ಯ ಸೇವನೆ ಮಾಡಿ ಅನುಚಿತವಾಗಿ ವರ್ತಿಸಿರುವುದು ಪೊಲೀಸರ ಗಮನಕ್ಕೆ ಬಂದಿತ್ತು.ಪೊಲೀಸರು ದಾಳಿ ನಡೆಸಿದ ಸಂದರ್ಭ ಆರೋಪಿಗಳು ಅಮಲಿನಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ತಕ್ಷಣ ಅವರನ್ನು ವಶಕ್ಕೆ ಪಡೆದು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಕಳುಹಿಸಲಾಗಿದೆ. ಅಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಢಪಟ್ಟಿದೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಬ್ಬಂದಿ ಹೇಮರಾಜ್ ಹಾಗೂ ಇಲಾಖಾ ಜೀಪ್‌ ಚಾಲಕ ಅಶೋಕ್ ಕಾರ್ಯಚರಣೆಯಲ್ಲಿ ಹಾಜರಿದ್ದರು.

Leave a Response

error: Content is protected !!