ಸುಬ್ರಹ್ಮಣ್ಯ:ಠಾಣೆಯ ಮುಂದೆ ನಡೆಯದ ಪ್ರತಿಭಟನೆ, ಕಾದು ನೋಡಲು ಹಿಂದೂ ಸಂಘಟನೆಗಳ ನಿರ್ಧಾರ

ಸುಬ್ರಹ್ಮಣ್ಯ:ಠಾಣೆಯ ಮುಂದೆ ನಡೆಯದ ಪ್ರತಿಭಟನೆ, ಕಾದು ನೋಡಲು ಹಿಂದೂ ಸಂಘಟನೆಗಳ ನಿರ್ಧಾರ

ಸುಬ್ರಹ್ಮಣ್ಯ ದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ನಿನ್ನೆ ನಡೆಯಲು ಉದ್ದೇಶಿಸಿದ್ದ ಪ್ರತಿಭಟನೆ ನಡೆದಿರುವುದಿಲ್ಲ. ಮುಂದಿನ ದಿನಗಳಲ್ಲಿ ಕಾದು ನೋಡಿ ಮುಂದಿ ನಿರ್ಧಾರಕ್ಕೆ ಕೈಗೊಳ್ಳುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ.

ಪೊಲೀಸರು ಅಮಾಯಕ ರ ಮೇಲೆ ಕೇಸು ಹಾಕುತಿದ್ದಾರೆ ಎಂಬ ಆರೋಪ ಹೊರಿಸಿ ಪ್ರತಿಭಟನೆ ನಡೆಸುವುದಾಗಿ ಹಿಂದೂ ಸಂಘಟನೆಗಳು ನಿನ್ನೆ ಸುಬ್ರಹ್ಮಣ್ಯ ಠಾಣೆಯ ಎದುರು ಪ್ರತಿಭಟನೆ ನಡೆಸುವುದಾಗಿ ಕರೆಕೊಟ್ಟಿದ್ದರು. ಆದರಂತೆ ಜ.7.ರಂದು ಸುಮಾರು ನೂರರಷ್ಟು ಹಿಂದು ಕಾರ್ಯಕರ್ತರು ಸುಬ್ರಹ್ಮಣ್ಯ ಠಾಣೆಗೆ ಬಂದಿದ್ದರು. ಬಳಿಕ ಠಾಣೆಯ ಒಳಗೆ ತೆರಳಿದ ಹಿಂದು ಜಾಗರಣಾ ವೇದಿಕೆಯ ರವಿರಾಜ್ ಶೆಟ್ಟಿ, ಭಜರಂಗದಳ ರಾಜ್ಯ ಸಂಚಾಲಕ ರಘು, ಹಿಂದೂ ಜಾಗರಣ ವೇದಿಕೆಯ ನರಸಿಂಹ ಶೆಟ್ಟಿ ಮಾಣಿ, ಚಿದಾನಂದ ಕಂದಡ್ಕ, ಅಶೋಕ್ ಆಚಾರ್ಯ, ಕಿಶೋರ್ ಕುಮಾರ್ ಶಿರಾಡಿ, ರಾಜೇಶ್ ಎನ್ ಮತ್ತಿತರರು


ಸುಬ್ರಹ್ಮಣ್ಯ ಠಾಣಾ ಎಸ್ ಐ ಮಂಜುನಾಥ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಕೇಸಿನ ಮಾಹಿತಿ ತಿಳಿದುಕೊಂಡರೆನ್ನಲಾಗಿದೆ. ಬಳಿಕ ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕೇಸಿನ ಸ್ಥಿತಿಗತಿ ನೋಡಿ ಮುಂದಿನ ನಿರ್ದಾರ ಕೈಗೊಳ್ಳುವುದಾಗಿ, ಇಂದಿನ ಪ್ರತಿಭಟನೆ ಕೈ ಬಿಟ್ಟಿರುವುದಾಗ ಸಂಘಟನೆ ಮುಖಂಡರು ಮಾಹಿತಿ ನೀಡಿದ್ದಾರೆ.

ವರದಿ: ಶಿವ ಭಟ್ ಸುಭ್ರಹ್ಮಣ್ಯ.

ರಾಜ್ಯ