ಪ್ರಕರಣ ದಾಖಲಿಸಿ, ಇಲಾಖಾ ತನಿಖೆ ನಡೆಸಿ 3 ಗಂಟೆಯೊಳಗಡೆ ತಪ್ಪಿತಸ್ಥರನ್ನು ಸಸ್ಪೆಂಡ್ ಮಾಡಿ :ಪೊಲೀಸ್ ದೌರ್ಜನ್ಯದ ಕುರಿತು ಎಸ್ಪಿಗೆ ಶಾಸಕ ಅಶೋಕ್ ರೈ ಖಡಕ್ ನಿರ್ದೇಶನ.

ಪ್ರಕರಣ ದಾಖಲಿಸಿ, ಇಲಾಖಾ ತನಿಖೆ ನಡೆಸಿ 3 ಗಂಟೆಯೊಳಗಡೆ ತಪ್ಪಿತಸ್ಥರನ್ನು ಸಸ್ಪೆಂಡ್ ಮಾಡಿ :
ಪೊಲೀಸ್ ದೌರ್ಜನ್ಯದ ಕುರಿತು ಎಸ್ಪಿಗೆ ಶಾಸಕ ಅಶೋಕ್ ರೈ ಖಡಕ್ ನಿರ್ದೇಶನ.

ಪುತ್ತೂರಿನಲ್ಲಿ ನಡೆದಿದೆ ಎನ್ನಲಾದ ಪೊಲೀಸ್
ದೌರ್ಜನ್ಯದ ವಿರುದ್ಧ ಪುತ್ತೂರು ಶಾಸಕರಾದ
ಅಶೋಕ್ ಕುಮಾರ್ ರೈ ಯವರು ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿಯವರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದು
” ಮುಂದಿನ ಮೂರು ಗಂಟೆಯಲ್ಲಿ ತಪಿತಸ್ಥರೆಂದು
ಕಂಡು ಬರುವ ಪೊಲೀಸ್ ಅಧಿಕಾರಿಗಳು ಹಾಗೂ
ಸಿಬ್ಬಂದಿ ಗಳನ್ನು ಅಮಾನತುಗೊಳಿಸಬೇಕೆಂದು
ತಿಳಿಸಿದ್ದಾರೆ.ಪೊಲೀಸ್ ದೌರ್ಜನ್ಯ ಪ್ರಕರಣದ ಕುರಿತು
ಹಲ್ಲೆಗೊಳಗಾದ ಯುವಕರಿಂದ ದೂರನ್ನು ಪಡೆದು
ಸಂಬಂದಪಟ್ಟವರ ವಿರುದ್ಧ ಪ್ರಕರಣ
ದಾಖಲಿಸಬೇಕು. ಬಳಿಕ ಇಲಾಖೆಯಿಂದ ತನಿಖೆ
ನಡೆಸಬೇಕು. ಮೂರು ಗಂಟೆಯೊಳಗಡೆ
ತಪಿತಸ್ಥರೆಂದು ಕಂಡು ಬರುವ ಅಧಿಕಾರಿಗಳನ್ನು
ಅಮಾನತುಗೊಳಿಸಬೇಕೆಂದು ಜಿಲ್ಲಾ ಪೊಲೀಸ್
ವರಿಷ್ಟಾಧಿಕಾರಿಗಳಿಗೆ ಸೂಚಿಸಿದ್ದಾರೆ.ಯಾವುದೇ ಇಲಾಖೆಯ ಅಧಿಕಾರಿಗಳು ಕಾನೂನು
ಮೀರಿ ವರ್ತಿಸುವುದನ್ನು ಸಹಿಸಲು ಸಾದ್ಯವಿಲ್ಲ.
ಕಾನೂನಿಗೆ ಒಳಪಟ್ಟು ಅಧಿಕಾರಿಗಳು ಕರ್ತವ್ಯ
ನಿರ್ವಹಿಸಬೇಕೆಂದು ಘಟನೆಯ ಕುರಿತು ಪ್ರತಿಕ್ರಿಯೆ
ನೀಡಿದ ಅಶೋಕ್ ಕುಮಾರ್ ರೈಯವರು
ತಿಳಿಸಿದ್ದಾರೆ.

ರಾಜ್ಯ